ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ 85 ಕೇಂದ್ರೀಯ ವಿದ್ಯಾಲಯಗಳು ಮತ್ತು 28 ಹೊಸ ನವೋದಯ ವಿದ್ಯಾಲಯಗಳನ್ನು ತೆರೆಯುವುದಾಗಿ ಪ್ರಕಟಿಸಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, ಕರ್ನಾಟಕದಲ್ಲಿ ಮೂರು ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 13 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. 28 ಹೊಸ ನವೋದಯ ವಿದ್ಯಾಲಯಗಳನ್ನು ತೆರೆಯುವುದಾಗಿ ಪ್ರಕಟಿಸಲಾಗುತ್ತದೆ, ಅರುಣಾಚಲ ಪ್ರದೇಶವೊಂದರಲ್ಲೇ ಎಂಟು ನವೋದಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ.
ಸಂಪುಟದಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ದೇಶದ 19 ರಾಜ್ಯಗಳಲ್ಲಿ ಈ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. ಮುಂದಿನ ಎಂಟು ವರ್ಷಗಳಲ್ಲಿ ಈ ಶಾಲೆಗಳನ್ನು ತೆರೆಯಲು 8,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೊಸದಾಗಿ 85 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯುವುದರಿಂದ 82 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರೀಯ ವಿದ್ಯಾಲಯಗಳು…
ಜಮ್ಮು-ಕಾಶ್ಮೀರ-13, ಮಧ್ಯಪ್ರದೇಶ-11, ರಾಜಸ್ಥಾನ – 9, ಒಡಿಶಾ – 8, ಆಂಧ್ರ ಪ್ರದೇಶ – 8, ಉತ್ತರ ಪ್ರದೇಶ – 5,
ಉತ್ತರಾಖಂಡ – 4, ಛತ್ತೀಸ್ಗಢ- 4, ಹಿಮಾಚಲ ಪ್ರದೇಶ – 4, ಕರ್ನಾಟಕ-3 ಮತ್ತು ಒಂದು ಅಪ್ಗ್ರೇಡ್
ಗುಜರಾತ್ – 3, ಮಹಾರಾಷ್ಟ್ರ-3, ಜಾರ್ಖಂಡ್ – 2, ತಮಿಳುನಾಡು – 2, ತ್ರಿಪುರ-2, ದೆಹಲಿ-1,
ಅಸ್ಸಾಂ-1, ಕೇರಳ-1, ಅರುಣಾಚಲ ಪ್ರದೇಶ-ಅಪ್ ಗ್ರೇಡ್
ಹೊಸ ನವೋದಯ ಶಾಲೆಗಳು..
ಅರುಣಾಚಲ ಪ್ರದೇಶ – 8, ತೆಲಂಗಾಣ-7, ಅಸ್ಸಾಂ-6, ಮಣಿಪುರ-3, ಪಶ್ಚಿಮ ಬಂಗಾಳ-2, ಕರ್ನಾಟಕ-ಅಪ್ ಗ್ರೇಡ್,
ಮಹಾರಾಷ್ಟ್ರ-1