ಪ್ರೀತಿಗಾಗಿ ಹಾಸ್ಟೆಲ್ ಮೇಲಿಂದ ಹಾರಿದ RCU ವಿದ್ಯಾರ್ಥಿ..?
ವಿವಿ ಘಟಿಕೋತ್ಸವದಂದು ನಡೆಯಿತು ಕಹಿ ಘಟನೆ ..!
ಆತ್ಮಹತ್ಯೆ ಯತ್ನಿಸಿದ VC ವಿಭಾಗದ ವಿಧ್ಯಾರ್ಥಿ..?
ನಿನ್ನೆ ವಿವಿಯಲ್ಲಿ ಪ್ರೇಮಿಗಳಿಬ್ಬರು ಚರ್ಚೆ ಮಾಡಿದ್ದಾದ್ದರು ಏನು..?
ಜನ ಜೀವಾಳ ವಿಶೇಷ ಬೆಳಗಾವಿ : ಪ್ರೀತಿಯ ವಿಷಯದಲ್ಲಿ ಮನಸ್ಥಾಪಗೊಂಡು ವಿವಿ ವಿಧ್ಯಾರ್ಥಿಗಳ ಹಾಸ್ಟೆಲ್ ಮೇಲಿಂದ ಮಧ್ಯರಾತ್ರಿ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ RCU MBA ವಿಭಾಗದ ವಿದ್ಯಾರ್ಥಿಯಿಂದ ಘಟನೆ ಇಂದು ನಡದಿದೆ.!
ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ MBA ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿ ಚೇತನ್ ಭೀಮಾ ನಾಯಿಕ ಎಂಬಾತ ಪ್ರೀತಿ ವಿಷಯದಲ್ಲಿ ಮನನೊಂದು ಆತ್ಮಹತ್ಯೆ ಯತ್ನಿಸಿದವ ಎಂದು ತಿಳಿದು ಬಂದಿದೆ.
ಮೂಲತಃ ಚಿಕ್ಕೋಡಿ ತಾಲೂಕಿನ ಕೇರೂರವಾಡಿಯ ಚೇತನ್ ನಾಯಿಕ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿನಿಯೊಂದಿಗೆ ಪ್ರೀತಿಯಲ್ಲಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ನಿನ್ನೆ ವಿವಿ ಆವರಣದಲ್ಲಿ ಸಾಯಂಕಾಲದವರೆಗೆ ಇಬ್ಬರು ಏಕಾಂತ ಸ್ಥಳದಲ್ಲಿ ಕುಳಿತು ತರಗತಿಗೆ ಹೋಗದೆ ಪ್ರೀತಿಯ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದರು ಎಂದು ತಿಳಿದಿದೆ. ನಂತರ ತಡರಾತ್ರಿ ಚೇತನ್ ವಿವಿಯ ಹಾಸ್ಟೆಲ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಗಂಭೀರವಾಗಿ ಗಾಯಗೊಂಡ ಆತನನ್ನು ನಗರದ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೇತನ್ ವಿವಿಯ ಹಾಸ್ಟೆಲ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕೆಲವರು ಹೇಳಿದರೆ ಇತ ಮೊಬೈಲ್ ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಿದ್ದಿದ್ದಾಗಿ ಕೆಲವರು ಹೇಳುತ್ತಿದ್ದಾರೆ.
ವಾರ್ಡನ್, ಸೆಕ್ಯೂರಿಟಿ ಸಿಬ್ಬಂದಿಗಳ ನಿರ್ಲಕ್ಷ್ಯ ..!
ಚೇತನ್ ವಿವಿಯ ಹಾಸ್ಟೆಲ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಗಂಟೆಗಳು ಕಳೆದರೂ ಯಾರು ಸಹ ಅವನತ್ತ ಚಿತ್ತ ಹಾಯಿಸಿಲ್ಲ. ನಂತರ ತಡವಾಗಿ ಬಂದು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಚಿಂತಾಜನಕ ಸ್ಥಿತಿಗೆ ತಲುಪಿದ್ದಾಗಿ ತಿಳಿದಿದೆ. ಮತ್ತೊಂದೆಡೆ ಘಟಿಕೋತ್ಸವದ ಹಿನ್ನಲೆಯಲ್ಲಿ ಈ ವಿಷಯ ಮುಚ್ಚಿಟ್ಟಿರುವುದಾಗಿ ತಿಳಿದು ಬಂದಿದೆ.
ಇನ್ನೊಂದೆಡೆ ಇಂದು RCU ಘಟಿಕೋತ್ಸವದಂದು ಈ ಘಟನೆ ನಡೆದಿರುವುದು ವಿವಿಗೆ ಕರಾಳ ದಿನವಾಗಿದೆ.
ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.