ಸಂಘದಿಂದ ಸಾಲ ತೆಗೆದು ಸಾವಿರಾರು ಮಹಿಳೆಯರಿಗೆ ಪಂಗನಾಮ ಹಾಕಿದ ಹಾಲಭಾವಿ ಹೆಣ್ಣು..!
ಮುತ್ಯಾನಟ್ಟಿ ಲೇಡಿ ಹಾಲಭಾವಿಯಿಂದ ಕೋಟಿ – ಕೋಟಿ ಲೂಟಿ ಮಾಡಿದ್ದು ಹೇಗೆ..?
ಬೆಳಗಾವಿ : ಸ್ವ ಸಹಾಯ ಸಂಘಗಳ ಹೆಸರು ಬಳಸಿಕೊಂಡು ಮಹಿಳೆಯರಿಗೆ ಸಾಲ ಕೊಡಿಸುವ ನೆಪದಲ್ಲಿ ಸಾವಿರಾರು ಮಹಿಳೆಯರಿಗೆ ಕೋಟ್ಯಾಂತರ ರೂ ಪಂಗನಾಮ ಹಾಕಿರುವ ಕಿಲಾಡಿ ಮಹಿಳೆ ವಿರುದ್ಧ ವಂಚನೆಗೊಳಗಾದ ಮಹಿಳೆಯರೆಲ್ಲರೂ ಸೇರಿಕೊಂಡು ಆಕೆಯ ಮನೆಯ ಮಂದೆ ಸೆರಿ ಹಣ ಮರಳಿಸುವಂತೆ ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಮುತ್ಯಾನಟ್ಟಿಯ ಹಾಗೂ ಹಾಲಿ ಹಾಲಭಾವಿ ಗ್ರಾಮದ ಯಲ್ಲವ್ವಾ ಕಮಲೇಶಕುಮಾರ ಬನ್ನಿಭಾಗ ಮಹಿಳೆಯರಿಗೆ ಪಂಗನಾಮ ಹಾಕಿರುವ ಕಿಲಾಡಿ ಹೆಣ್ಣು. ಈಕೆ ಸುಮಾರು ಸಾವಿರಾರು ಮಹಿಯರಿಗೆ ಅವರ ಹೆಸರಿನಲ್ಲಿ ರಾಣಿ ಚನ್ನಮ್ಮ, ವಾಲ್ಮೀಕಿ ಹಾಗೂ ವಿವಿಧ ಸ್ವ ಸಹಾಯ ಸಂಘಗಳಿಂದ 50 ಸಾವಿರ ರೂ ಸಾಲ ತೆಗೆದಿದ್ದಾಳೆ. ಅದರಲ್ಲಿ ಕೆಲವರಿಗೆ 25 ರೂ ಕೊಟ್ಟು ಇನ್ನೂ ಕೆಲವರಿಗೆ ಏನೂ ಕೊಡದೆ ಸಾಲದ ರೂಪದಲ್ಲಿ ಎಂದು ಹಣ ಪಡೆದು ಆ ಸಾಲದ ಮರು ಪಾವತಿಯ ಸಂಪೂರ್ಣ ಜವಾಬ್ದಾರಿಯನ್ನು ಆಕೆ ತೆಗೆದುಕೊಳ್ಳುವುದಾಗಿ ನಂಬಿಸಿ ಹತ್ತಾರು ಕೋಟಿ ರೂ ಪಡೆದಿದ್ದಾಳೆ.
ನಂತರ ಸಾಲವನ್ನು ಮರು ಪಾವತಿ ಮಾಡದೆ ಮಹಿಳೆಯರಿಗೆ ವಂಚಿಸಿದ್ದಾಳೆ. ಇದರಿಂದ ಕಂಗಾಲಾದ ಸಾವಿರಾರು ಮಹಿಳೆಯರು ಹಲವು ಬಾರಿ ಮನವಿ ಮಾಡಿದ್ದಾರೆ ಆದರೆ ಆಕೆ ಇವರಿಗೆ ಆವಾಜ ಹಾಕಿ ಬೆದರಿಸಿದ್ದಾಳೆ. ಇದರಿಂದ ದಿಕ್ಕು ತೊಚದಂತಾದ ಮಹಿಳೆಯರೆಲ್ಲರೂ ಇಂದು ಆಕೆಯ ಮನೆಗೆ ತೆರಳಿ ತಮ್ಮ ಹೆಸರಿನಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಇಷ್ಟರಲ್ಲಿ ಈ ವಿಷಯ ತಿಳಿದು ಕಾಕತಿ ಪಿಐ ಸುರೇಶ್ ಶಿಂಗಿ ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವ ವಿಷಯ ತಿಳಿದು ಸ್ವತಃ ಡಿಸಿಪಿ ರೋಹನ್ ಜಗದೀಶ, ಎಸಿಪಿ ಗಂಗಾಧರ್ ಧಾವಿಸಿ ಪರಿಶೀಲನೆ ನಡೆಸಿದರು.