ಬೆಳಗಾವಿ-ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು
ಕಳೆದ ೨೩ ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಾ ಬಂದಿದೆ.
ಅದರ ಪ್ರಯುಕ್ತ ಶನಿವಾರ ದಿ ೩೦ ರಂದು ಮುಂಜಾನೆ ೧೦.೩೦ ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿದೆ
ಈ ಸಲ ಕನ್ನಡ ಗಡಿತಿಲಕ ಪ್ರಶಸ್ತಿಯನ್ನು ಸಂಕೇಶ್ವರದ ಕನ್ನಡದ ಕಟ್ಟಾಳು ಪ್ರೊ ಎಲ್ ವಿ ಪಾಟೀಲ ಅವರಿಗೆ ಹಾಗೂ ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಯನ್ನು ಕೊಪ್ಪಳದ ಯುವಕವಿ ಶ್ರೀ ವೀರೇಶ ಕುರಿ ಅವರ ಮಿಠಾಯಿ ಮಾಮ ಮಕ್ಕಳ ಕವನ ಸಂಕಲನಕ್ಕೆ ನೀಡಲಾಗುವುದು.
ಎಸ್ ಎಂ ಕುಲಕರ್ಣಿ ಪ್ರಶಸ್ತಿ ಪ್ರದಾನ ಮಾಡುವರು ಪ್ಅ ಬಿ ಎಸ್ ಗವಿಮಠ ಮುಖ್ಯ ಅತಿಥಿಯಾಗಿ ಆಗಮಿಸುವರು. ಡಾ ಪಿ ಜಿ ಕೆಂಪಣ್ಣವರ ಅಭಿನಂದನ ನುಡಿಗಳನ್ನಾಡುವರು .ಈ ಸಂದರ್ಭದಲ್ಲಿ ಕವಿ ಗೋಷ್ಠಿಯನ್ನು ಇಟ್ಟುಕೊಳ್ಳಲಾಗಿದ್ದು ಆಸಕ್ತರು ಆಗಮಿಸಬೇಕೆಂದು ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.