ಬೈಲಹೊಂಗಲ: ತಾಲ್ಲೂಕಿನ ಸಂಪಗಾವಿಯ ಆರ್ಇಎಸ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ 1980–81ನೇ ಬ್ಯಾಚ್ನ ವಿದ್ಯಾರ್ಥಿಗಳ ಸ್ನೇಹ ಬಳಗವು ಸಂಪಗಾವಿಯ ಬೈಲಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಗುರುವಂದನೆ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.
43 ವರ್ಷಗಳ ನಂತರ ಸೇರಿದ ಹಳೇ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ತಾವು ಕಲಿತ ಶಾಲೆ ಕಂಡು ಪುಳಕಗೊಂಡರು.
ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ವಿಜಯಲಕ್ಷ್ಮಿ ಪುಟ್ಟಿ, ‘ಗುರು ಹಾಗೂ ಶಿಷ್ಯ ಪರಂಪರೆ ನಮ್ಮಲ್ಲಿ ಮಹತ್ವ ಪಡೆದಿದೆ. ಪ್ರತಿಯೊಬ್ಬರೂ ತಮ್ಮ ಶಿಕ್ಷಕರು, ಶಾಲೆ, ಊರು, ಹೆತ್ತವರು ಮತ್ತು ಸಮಾಜದ ಋಣ ತೀರಿಸಬೇಕು’ ಎಂದು ಕರೆಕೊಟ್ಟರು.
ಸಾನ್ನಿಧ್ಯ ವಹಿಸಿದ್ದ ಚನ್ನವೀರಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಎಸ್.ಸಿ.ಹಳ್ಳೂರ, ಕೆ.ಕೆ.ಹಾರೂಗೊಪ್ಪ, ಎಂ.ವೈ.ರಾವುಳ, ಸುಮಿತ್ರಾ ಶರಣಪ್ಪನವರ, ಎ.ಎಂ.ಲೋದಿ, ಎಸ್.ಎಸ್.ಕುಂಬಾರ, ಬಿ.ಎಸ್.ಸಿದ್ನಾಳ, ಪಿ.ಬಿ.ಗುರುಪುತ್ರನವರ, ಪತ್ರೆಪ್ಪ ಹುಣಶಿಕಟ್ಟಿ ಅವರನ್ನು ಸತ್ಕರಿಸಲಾಯಿತು.
ನಿವೃತ್ತ ಶಿಕ್ಷಕ ಬಿ.ಬಿ.ಚರಂತಿಮಠ, ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಹಲ್ಕಿ ಆರ್ಇಎಸ್ ಪ್ರೌಢಶಾಲೆ ಅಧ್ಯಕ್ಷ ಶಂಕ್ರೆಪ್ಪ ಸಿದ್ನಾಳ, ಹುಬ್ಬಳ್ಳಿಯ ಚೇತನ ಕಾಲೇಜು ಅಧ್ಯಕ್ಷ ಗುರುಶಾಂತ ವಳಸಂಗ, ಮುಖ್ಯಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ ಶ್ರೀಕಾಂತ ನೇಗಿನಹಾಳ, ಎಸ್.ಡಿ.ಗಂಗನ್ನವರ,
ಅಡಿವೆಪ್ಪ ರಾಯನ್ನವರ, ಮಹಾದೇವ ವಕ್ಕುಂದ, ಮಹಾಂತೇಶ ಪುಟ್ಟಿ, ಶೇಖಯ್ಯ ಯರಗಂಬಳಿಮಠ, ಮೋಹನ ಬಡಿಗೇರ, ರುದ್ರಪ್ಪ ಅಂಗಡಿ, ಮುಗುಟಸಾಬ್ ಗೂಡುನವರ, ರಾಜೇಂದ್ರ ಪಾಟೀಲ, ಬಸನಗೌಡ ಪಾಟೀಲ,
ಸುಜಾತಾ ಅಕ್ಕಿ, ಕಸ್ತೂರಿ ಅಕ್ಕಿ ಇತರರಿದ್ದರು.