ಯಮಕನಮರಡಿಯ ಪಿಐ ಜಾವೇದ ಮುಶಾಪುರೆಯವರ ಕ್ರಿಯಾಶೀಲತೆ ತನಿಖೆಯಿಂದ ಎರಡು ಬಂಗಾರ ಕಳುವಿನ ಪ್ರಕರಣಗಳು ಬಯಲಿಗೆ ಬಂದಿದ್ದು, ಕಳ್ಳತನ ಮಾಡಿದ ನಾಲ್ವರನ್ನು ಹೆಡೆಮುರಿ ಕಟ್ಟಿ; ನೊಂದವರ ಪಾಲಿಗೆ ಪಿಐ ಹಿರೋ ಎನಿಸಿಕೊಂಡಿದ್ದಾರೆ ಎಂದರೆ ಅತೀಶಯೋಕ್ತಿಯಲ್ಲ.
ಎರಡು ಕಳುವಿನ ಪ್ರಕರಣಗಳ ಪತ್ತೆ: ಅಡಿವಪ್ಪಾ ಲಗಮಪ್ಪಾ ಬಾಗರಾಯಿ ಸಾ: ಇಸ್ಲಾಂಪೂರ ಇವರ ಮನೆಯಿಂದ 27-10-2024 ರಂದು 2200 ಗಂಟೆಯಿಂದ ದಿ. 28-10-2024 ರಂದು ಮುಂಜಾನೆ 6-30 ಗಂಟೆಯ ಅವಧಿಯಲ್ಲಿ ಸುಮಾರು 30 ಗ್ರಾಂ ತೂಕದ ಬಂಗಾರದ ಆಭರಣಗಳು ಕಳುವಾಗಿದ್ದವು. (ಅಪರಾಧ ಸಂಖ್ಯೆ 165/2024)
ಇನ್ನೊಂದು ಪ್ರಕರಣ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸವೀತಾ ಬಸವರಾಜ ನಗಾರಿ ಸಾಃ ಯಮಕನಮರಡಿ ಇವರ ಪರ್ಸನಲ್ಲಿದ್ದ 2.5 ಗ್ರಾಂ ತೂಕದ ಬಂಗಾರದ ಆಭರಣಗಳು ಲಪಟಾಯಿಸಿದ್ದ 1. ಲಕ್ಷ್ಮೀಕಾಂತ ಕೃಷ್ಣಪ್ಪಾ ಬೇಡರಹಟ್ಟಿ ವಯಸ್ಸು 19 ವರ್ಷ ಸಾಃ ಬೇಡರಹಟ್ಟಿ ಹಾಲಿ: ದಾದಬಾನಟ್ಟಿ
2) ಈರಣ್ಣಾ ರವಿ ನಾಯಿಕ ವಯಸ್ಸು 22 ವರ್ಷ ಸಾಃ ಉಳ್ಳಾಗಡ್ಡಿ ಖಾನಾಪೂರ ಹಾಲಿಃ ದಾದಬಾನಟ್ಟಿ
3) ಸಂಜಯ ಸುರೇಶ ಗಡದಕ್ಕಿ ವಯಸ್ಸು 22 ವರ್ಷ ಸಾಃ ದಾದಬಾನಟ್ಟಿ (ಅಪರಾಧ ಸಂಖ್ಯೆ 134/2024) ಇವರನ್ನು 23-11-2024 ರಂದು ದಸ್ತಗೀರ ಮಾಡಿ ಅವರ ಕಡೆಯಿಂದ ಎರಡು ಪ್ರಕರಣದಲ್ಲಿ ಕಳುವಿಗೆ ಹೋದ ಈ ತಂಡದಿಂದ 5.5 ಗ್ರಾಂ ತೂಕದ ಆಭರಣಗಳನ್ನು ವಶ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜನ ಜೀವಾಳದೊಂದಿಗೆ ಮಾತನಾಡಿದ ಇಬ್ಬರು ನೊಂದವರು ಪಿ.ಐ ಮುಶಾಪುರೆ ಅವರ ಅವಿರತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.