ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯದತ್ತ ಮುನ್ನುಗುತ್ತಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ, ಸಂಡೂರಿನಲ್ಲಿ ಅನ್ನಪೂರ್ಣ ಮತ್ತು ಶಿಗ್ಗಾವಿಯಲ್ಲಿ ಯಾಸಿರ್ ಪಠಾಣ ಅವರು ಮುನ್ನಡೆ ಕಾಯ್ದುಕೊಂಡಿದ್ದು ಭರ್ಜರಿ ಜಯದತ್ತ ಸಾಗುತ್ತಿದ್ದಾರೆ. ಕೆಲವೇ ಸುತ್ತುಗಳು ಉಳಿದಿದ್ದು ಕಾಂಗ್ರೆಸ್ ಅಭ್ಯರ್ಥಿಗಳು ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜಾರ್ಖಂಡ್ ನಲ್ಲಿ ಇಂಡಿಯಾ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಅರ್ಧಶತಕ ಬಾರಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ದೂರವಾದಂತಿದೆ.
ಆದರೆ, ಮತ್ತೊಂದು ದೊಡ್ಡ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಎನ್ ಡಿಎ ನೇತೃತ್ವದ ಮಹಾಯುತಿ ಸದ್ಯ 210ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.