ಉಡುಪಿ : ನಕ್ಸಲ್ ನಿಗ್ರಹ ಗುಂಡಿಗೆ ಬಲಿಯಾಗಿರುವ ನಕ್ಸಲ್ ಮುಖಂಡ ವಿಕ್ರಂ ಗೌಡನ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿಯಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ನಂತರ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 169 Aಯಲ್ಲಿ ಆಂಬುಲೆನ್ಸ್ ಪಲ್ಟಿಯಾಯಿತು. ಹೀಗಾಗಿ ಆತನ ಮೃತ ದೇಹವನ್ನು ಬೇರೆ ವಾಹನದಲ್ಲಿ ತೆಗೆದುಕೊಂಡು ಹೆಬ್ರಿ ಬಳಿಯ ಕೂಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದರು.
ನಕ್ಸಲ್ ನಿಗ್ರಹ ದಳ ನಡೆಸಿದ ಎನ್ಕೌಂಟರ್ನಲ್ಲಿ ಮೃತಪಟ್ಟಿರುವ ವಿಕ್ರಂ ಗೌಡನ ಅಂತ್ಯಸಂಸ್ಕಾರವನ್ನು ಆತನ ಹುಟ್ಟೂರು ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ನೆರವೇರಿಸಲು ಸಿದ್ಧತೆ ನಡೆದಿದೆ.
ವಿಕ್ರಂ ಗೌಡನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳವಾರ ತಡರಾತ್ರಿ ನಡೆದಿದೆ.
ಮೃತದೇಹವನ್ನು ಸ್ವೀಕರಿಸಲು ವಿಕ್ರಂ ತಂಗಿ ಮತ್ತು ತಮ್ಮ ಮಣಿಪಾಲದ ಆಸ್ಪತ್ರೆಗೆ ತಲುಪಿದ್ದಾರೆ.
‘ಕೂಡ್ಲು ಸಮೀಪ ವಿಕ್ರಂಗೆ ಒಂದು ಎಕರೆ ಜಾಗವಿದ್ದು, ಆಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ ಎಂದು ವಿಕ್ರಂನ ತಮ್ಮ ಸುರೇಶ ಗೌಡ ಹಾಗೂ ತಂಗಿ ಸುಗುಣ ತಿಳಿಸಿದ್ದಾರೆ.
ರಸ್ತೆಗೆ ಅಡ್ಡ ಬಂದ ದನ :
ಹೆಬ್ರಿಯ ಪೀತಬೈಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರಕ್ಕಾಗಿ ಮಣಿಪಾಲದಿಂದ ಕೂಡ್ಲುವಿಗೆ ಕೊಂಡೊಯ್ಯುತ್ತಿದ್ದಾಗ ಹೆಬ್ರಿ ಬಳಿ ಆಂಬುಲೆನ್ಸ್ ರಸ್ತೆಬದಿಗೆ ವಾಲಿದೆ. ಅತಿ ವೇಗದಿಂದ ಸಂಚರಿಸುತ್ತಿದ್ದ ಆಂಬುಲೆನ್ಸ್ ರಸ್ತೆ ಬದಿಗೆ ವಾಲಿದ್ದು, ಅದರಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ಆಂಬುಲೆನ್ಸ್ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೊಂಡೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.
ಆಂಬುಲೆನ್ಸ್ ವೇಗವಾಗಿ ಸಂಚರಿಸುತ್ತಿದ್ದಾಗ ದಿಢೀರನೆ ದನ ರಸ್ತೆಗೆ ಅಡ್ಡ ಬಂದಿದೆ, ಇದರಿಂದಾಗಿ ಆಂಬುಲೆನ್ಸ್ ರಸ್ತೆ ಬದಿಗೆ ಸರಿದಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದರು.