ಬೆಳಗಾವಿ : ತಹಸೀಲ್ದಾರ್ ಕಚೇರಿ ಗುಮಾಸ್ತ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡೆಬಜಾರ್ ಪೊಲೀಸರು ಬೆಳಗಾವಿಯ ತಹಸೀಲ್ದಾರ್ ಬಸವರಾಜ್ ನಾಗರಾಳ, ಗುಮಾಸ್ತ ಅಶೋಕ್ ಕಬ್ಬನಗಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ದೊಡ್ಡವಾಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ 108 ರನ್ವಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಸೋಮವಾರ ರಾತ್ರಿ ರುದ್ರಣ್ಣ ಯಡಣ್ಣವರ ಬೆಳಗಾವಿಯ ರಿಸಾಲ್ದಾರ್ ಗಳ್ಳಿಯಲ್ಲಿನ ತಹಸೀಲ್ದಾರ್ ಕಚೇರಿಯ ತಹಸೀಲ್ದಾರ್ ಅವರ ನ್ಯಾಯಾಲಯದ ಕೊನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕಿಂತ ಮೊದಲು ತಾವು ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ವಿಡಿಯೋ ರೆಕಾರ್ಡ್ ಮತ್ತು ಡೆತ್ ನೋಟ್ ಬರೆದಿಟ್ಟು, ವಿಡಿಯೋ ರೆಕಾರ್ಡ್ ತಮ್ಮ ಕಚೇರಿಯ ವಾಟ್ಸ್ ಆಪ್ ಗ್ರೂಪ್ ಗಳಿಗೆ ಹಂಚಿಕೊಂಡಿದರು.
ತಾವು ಆತ್ಮಹತ್ಯೆ ಮಾಡಿಕೊಳ್ಳಲು ತಹಸೀಲ್ದಾರ್ ಬಸವರಾಜ್ ನಾಗರಾಳ್, ಸಹೋದ್ಯೋಗಿ ಅಶೋಕ್ ಕಬ್ಬನಗಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ದೊಡ್ಡವಾಡ ಅವರ ಕಿರುಕುಳವೇ ಕಾರಣವೆಂದು ಆರೋಪಿಸಿದ್ದರು.