ಬೆಳಗಾವಿ :
ಬೆಳಗಾವಿ ಕೇಂದ್ರೀತ ಗಡಿ ವಿವಾದ ಮತ್ತೆ ಗರಿಗೆದರಿದೆ. ಈ ನಡುವೆ ಮಹಾರಾಷ್ಟ್ರದ ಕನ್ನಡಿಗರು ಹೊಸ ಕರ್ನಾಟಕ ನಕಾಶೆ ಬಿಡುಗಡೆಗೊಳಿಸುವ ಮೂಲಕ ಆ ರಾಜ್ಯದ ಮುಖಭಂಗಕ್ಕೆ ಕಾರಣವಾಗಿದ್ದಾರೆ.
ಇವೆಲ್ಲವೂ ಕನ್ನಡ ಭಾಷಿಕರ ಬಾಹುಳ್ಯದ ಕನ್ನಡ ಭಾಷಿಕರಿರುವ ಅಚ್ಚಗನ್ನಡ ಪ್ರದೇಶಗಳು. ಹೀಗಾಗಿ ತಮ್ಮ ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನ ಮಾಡುವಂತೆ ಗಡಿ ಕನ್ನಡಿಗರು ಒತ್ತಾಯಿಸಿದ್ದಾರೆ.
ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಉಸ್ಮಾನಬಾದ್, ಲಾತೂರ್ ಜಿಲ್ಲೆಗಳನ್ನು ಹೊಸ ನಕಾಶೆಯಲ್ಲಿ ಸೇರಿಸಲಾಗಿದೆ. ಇವೆಲ್ಲವೂ ಕರ್ನಾಟಕಕ್ಕೆ ಹೊಂದಿಕೊಂಡಿರುವ ಪ್ರದೇಶಗಳು.
ಜತೆಗೆ ಕನ್ನಡ ಭಾಷಿಕರು ಹೆಚ್ಚು ಸಂಖ್ಯೆಯಲ್ಲಿ ಇರುವ ಜತ್ ತಾಲೂಕು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಜತ್ ತಾಲೂಕನ್ನು ಕರ್ನಾಟಕದಲ್ಲಿ ಸೇರ್ಪಡೆ ಮಾಡುವಂತೆ ತುಸು ಬಲವಾಗಿಯೇ ಒತ್ತಾಯಪಡಿಸಿದ್ದಾರೆ.