ಲಕ್ನೋ: ಬೆರಗುಗೊಳಿಸಿರುವ ಗಮನಾರ್ಹ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡದಿದ್ದರೂ ಪ್ರತಿದಿನ ಹಾಲು ನೀಡುತ್ತಿದೆ…! ಈ ಅಚ್ಚರಿಯ ವಿದ್ಯಮಾನಕ್ಕಾಗಿ ಸ್ಥಳೀಯವಾಗಿ ಈ ಹಸುವನ್ನು ʼಕಾಮಧೇನುʼ ಎಂದು ಪೂಜಿಸಲಾಗುತ್ತದೆ. ಇದು ಈಗ ಜನರಿಗೆ ಮತ್ತು ತಜ್ಞರಿಗೆ ಇದುಆಕರ್ಷಣೆಯ ವಿಷಯವಾಗಿದೆ.
ಪಯಾಗಪುರ ತೆಹಸಿಲ್ನ ಗಂಗಾತಿವಾರಿಪುರ ಗ್ರಾಮದ ಈ ಹಸು ನಿವೃತ್ತ ಪ್ರಾಧ್ಯಾಪಕ ಡಾ. ಓಂಕಾರನಾಥ್ ತ್ರಿಪಾಠಿ ಅವರಿಗೆ ಸೇರಿದೆ. ಅವರು ನಿವೃತ್ತರಾದ ನಂತರ ತಮ್ಮ ಹಲವಾರು ಹಸುಗಳನ್ನು ಸಾಕಿದ್ದು, ಇದಕ್ಕಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದಾರೆ. ಕೇವಲ ಎರಡೂವರೆ ವರ್ಷ ವಯಸ್ಸಿನ ಈ ಹೈಬ್ರಿಡ್ ಸಾಹಿವಾಲ್ ಹಸು ಕರು ಹಾಕದಿದ್ದರೂ ಸುಮಾರು ಆರು ತಿಂಗಳ ಹಿಂದೆ ಹಾಲು ನೀಡಲು ಪ್ರಾರಂಭಿಸಿದೆ.
ಆರಂಭದಲ್ಲಿ, ಇದು ಕೇವಲ 250 ಎಂ.ಎಲ್. ಹಾಲು ಮಾತ್ರ ನೀಡಿತು. ಆದರೆ ನಿಯಮಿತವಾಗಿ ಹಾಲು ಕರೆಯಲು ಆರಂಭಿಸಿದ ನಂತರ ಅದು ಈಗ ದಿನಕ್ಕೆ 4 ಲೀಟರ್ ಹಾಲು ನೀಡುತ್ತಿದೆ.ಹಸುವಿನ ಹಾಲಿನ ಕೊಬ್ಬಿನ ಅಂಶವು ಸರಾಸರಿಯಾಗಿ ಹಾಲಿನಲ್ಲಿರುವ ಕೊಬ್ಬಿನ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ, ಇದು ಸ್ಥಳೀಯ ಪಶುವೈದ್ಯರ ಆಸಕ್ತಿಯನ್ನು ಕೆರಳಿಸಿದೆ.
ಡಾ. ತ್ರಿಪಾಠಿ ಅವರು ಹಸುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕುತೂಹಲಕಾರಿ ವಿಷಯವೆಂದರೆ ಅವರು ತಾನು ಸಾಕುತ್ತಿರುವ ಮತ್ತೊಂದು ಕರುವನ್ನು ಪೋಷಿಸಲು ಈ ಹಾಲನ್ನು ಬಳಸುತ್ತಾರೆ. ಈ ಅಪೂರ್ವ ಹಸುವಿನ ತಾಯಿಯು ಜನ್ಮ ನೀಡಿದ ಸ್ವಲ್ಪ ಸಮಯದ ನಂತರ ಮೃತಪಟ್ಟಿದೆ.
ಈ ಅಸಾಮಾನ್ಯ ವಿದ್ಯಮಾನದ ಬಗ್ಗೆ ಸಮಾಲೋಚಿಸಿದಾಗ, ಪ್ರಾಣಿ ವಿಜ್ಞಾನಿಗಳು ಗರ್ಭಧಾರಣೆಯಿಲ್ಲದೆ ಆಕಳು ಹಾಲು ನೀಡುತ್ತಿರುವುದು ಹಾರ್ಮೋನ್ ಅಸಮತೋಲನದಿಂದ ಉಂಟಾಗಬಹುದು ಎಂದು ಹೇಳುತ್ತಾರೆ. ಈ ಪ್ರಕರಣವು ಪ್ರಾಣಿಗಳ ಜೀವಶಾಸ್ತ್ರದ ಸಂಭಾವ್ಯ ಪರಿಣಾಮಗಳು ಮತ್ತು ರಹಸ್ಯಗಳ ಕುರಿತು ಹಾಗೂ ಈ ‘ಪವಾಡದ ಹಸುವಿನ’ ಬಗ್ಗೆ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ದನದ ಸುತ್ತಲಿನ ಆಕರ್ಷಣೆಯು ಊರಿಂದ ಊರಿಗೆ ಬೆಳೆಯುತ್ತಿರುವಂತೆ, ಅನೇಕರು ಹಸುವನ್ನು ಭೇಟಿ ಮಾಡುತ್ತಿದ್ದಾರೆ, ಇದು ದೇವರ ಕೊಡುಗೆ ಎಂದು ಭಾವಿಸುತ್ತಾರೆ.