ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ನವೆಂಬರ್ 26ಕ್ಕೆ 75 ವರ್ಷ ತುಂಬುತ್ತದೆ. ಇದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ತಿನ ಸಂವಿಧಾನ ಸದನದ ಸಭಾಂಗಣದಲ್ಲಿ ಅಧಿವೇಶನ ನಡೆಯಲಿದೆ. 1949 ರ ನವೆಂಬರ್ 26 ರಂದು ಅಂದಿನ ಸಂಸತ್ತು ಇದೇ ಸಭಾಂಗಣದಲ್ಲಿಯೇ ಸಂವಿಧಾನವನ್ನು ಅಂಗೀಕರಿಸಿತ್ತು.
ನ.26 ಅನ್ನು ಪ್ರತಿ ವರ್ಷವೂ ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ (2015) ಸಂದರ್ಭದಿಂದ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ.