ಕಿತ್ತೂರು ತಹಶಿಲ್ದಾರ ಹಲಗಿ ಲೋಕಾಯುಕ್ತ ಬಲೆಗೆ ..!
ಲಕ್ಷಾಂತರ ಲಂಚಕ್ಕಾಗಿ ಬೇಡಿಕೆ ಇಟ್ಟವರನ್ನು ಜೈಲಿಗಟ್ಟಿದ ವಂಟಗೂಡಿ..!
ಬೆಳಗಾವಿ : ತಂದೆ ಹೆಸರಿನಲ್ಲಿದ್ದ ಜಮೀನಿನ ಖಾತಾವನ್ನು ಮಗನ ಹೆಸರಿಗೆ ಬದಲಾವಣೆ ಮಾಡಲು ಲಂಚ ಪಡೆಯುತ್ತಿದ್ದ ಚನ್ನಮ್ಮನ ಕಿತ್ತೂರು ತಾಲೂಕಿನ ತಹಶಿಲ್ದಾರರ ಹಾಗೂ ಸಿಬ್ಬಂದಿ ಇಂದು(ಶುಕ್ರವಾರ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ
ಚನ್ನಮ್ಮನ ಕಿತ್ತೂರು ತಹಶಿಲ್ದಾರ ಸೋಮಲಿಂಗಪ್ಪ ಹಲಗಿ ಹಾಗೂ ಕಚೇರಿ ಅಧಿಕಾರಿ ಪ್ರಸನ್ನ ಎಂಬುವರ ಮೇಲೆ ಶುಕ್ರವಾರ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಖೋದಾನಪುರ ಗ್ರಾಮದ ರಾಜೇಂದ್ರ ಇನಾಮದಾರ ಎಂಬುವರು ತಮ್ಮ ತಂದೆ ಹೆಸರಿನಲ್ಲಿದ್ದ 10 ಎಕರೆ ಭೂಮಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ತಹಶಿಲ್ದಾರರ ಹಾಗೂ ಸಿಬ್ಬಂದಿ 5 ಲಕ್ಷ ರೂ ಹಣದ ಬೇಡಿಕೆಯಿಟ್ಟದ್ದರು. ಇದರಿಂದಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ವೈಖರಿ ವಿರುದ್ಧ ಬೇಸತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.
ಈ ದೂರಿನನ್ವಯ ಕಾರ್ಯಪ್ರವೃತರಾದ ಲೋಕಾಯುಕ್ತ ಅಧೀಕ್ಷಕಿ ಯಶೋಧಾ ವಂಟಗೂಡಿ ತಂಡ ಮೊದಲ ಹಂತದಲ್ಲಿ ಎರಡು ಲಕ್ಷ ರೂ ಹಣ ಪಡೆಯುತ್ತಿದ್ದ ಸಮಯದಲ್ಲಿ ಲಂಚಬಾಕ ತಹಶೀಲ್ದಾರ ಸೋಮಲಿಂಗಪ್ಪ ಹಲಗಿ ಹಾಗೂ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಣದ ಸಮೇತ ವಶಪಡಿಸಿಕೊಂಡಿದ್ದಾರೆ.