ಬೆಳಗಾವಿ :
ಪೊಲೀಸ್ ವಿಚಾರಣಾ ಹಂತದ ವೇಳೆ ಸಾವಿಗೀಡಾದ ಬೆಲ್ಲದ ಬಾಗೇವಾಡಿ ಮೂಲದ ವ್ಯಕ್ತಿಯ ಪ್ರಕರಣದ ಮುಂದುವರೆದ ಭಾಗ ಹೊರಗೆಡವದೇ ಪೊಲೀಸ್ ಇಲಾಖೆ ಗಪ್ ಚುಪ್ ಆಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಆತನ ಗ್ರಾಮದಿಂದ ಕರೆತಂದಿದ್ದ ಬೆಳಗಾವಿ ಗ್ರಾಮೀಣ ಪೊಲೀಸರ ವಿಚಾರಣಾ ವೇಳೆಯೇ ಆತ ಅಸುನೀಗಿದ್ದ. ಸದರಿ ಪ್ರಕರಣದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಆಗಲಿ, ಅದರ FIR ಕಾಪಿ ಆಗಲಿ, ಆ ಸಮಯದ ಪೊಲೀಸ್ ಠಾಣೆಯ ಸಿಸಿಟಿವಿ ಫೂಟೇಜ್ ಆಗಲಿ ಇನ್ನೂ ಹೊರಬಿದ್ದಿಲ್ಲ..!!
ಮೃತನ ಮಗಳು ಪ್ಯಾರಾ ಮೆಡಿಕಲ್ ಸ್ಟುಡೆಂಟ್ ಆಗಿದ್ದು, ಆಗಲೇ ಆಕೆ ತನ್ನ ತಂದೆಯ ಸಾವಿನ ಬಗ್ಗೆ ದಟ್ಟ ಸಂಶಯ ವ್ಯಕ್ತಪಡಿಸಿ ‘ಪೊಲೀಸ್ ಅಟ್ರಾಸಿಟಿ’ ಎಂದು ಹೇಳಿದ್ದು ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಹೀಗಿದ್ದಾಗಲೂ ಈ ಪ್ರಕರಣ ಮುಂದುವರೆದ ಭಾಗವಾಗಲಿ, ನಡೆದಿರುವ ತನಿಖೆಯ ಪ್ರಗತಿಯ ಬಗ್ಗೆಯಾಗಲಿ ಇತ್ಯಾದಿ ವಿಷಯಗಳ ಬಗೆಗೆ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಇಲ್ಲವೇ ಡಿಸಿಪಿ ರವೀಂದ್ರ ಗಡಾದಿ ಅವರು ತುಟಿ ಪಿಟ್ ಅನ್ನದೇ ಗಪ್ ಆಗಿದ್ಯಾಕೆ? ಎಂಬ ಸಾರ್ವಜನಿಕ ಚರ್ಚೆ ಗರಿಗೆದರಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥರು ಯಾರು..!? ಯಾರು ಮುಗ್ದರು..? ಯಾರು ಕುಚೋದ್ಯರು..? ಎಂಬುವುದನ್ನು ತನಿಖೆ ಕೈಗೆತ್ತಿಕೊಂಡಿದೆ ಎನ್ನಲಾದ ಸಿಐಡಿ ವಿಭಾಗದಿಂದ ಸಾರ್ವಜನಿಕರಿಗೆ ತಿಳಿದುಬರಬೇಕಿದೆ.
ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡು ವಿಚಾರಣೆಗೆ ತರಲಾಗುತ್ತಿದ್ದ ವ್ಯಕ್ತಿಗೆ ಹಲ್ಲೆ ಮಾಡಲಾಗಿತ್ತು ಎಂಬ ಆರೋಪದ ಜೊತೆಗೆ ಇಡೀ ಪ್ರಕರಣದ ಮೇಲೆ ವ್ಯವಸ್ಥಿತ ಎಳ್ಳು ನೀರು ಬಿಡುವ ಪೊಲೀಸ್ ಇಲಾಖೆಯ ಒಳಗೊಳಗಿನ ಪ್ರಯತ್ನ ಕೈಗೂಡದೇ, ಬೆಳಗಾವಿ ಅಧಿವೇಶನದಲ್ಲಿ ಹೊರಬೀಳುವುದು ಖಚಿತವಾಗಿದೆ.