ಲಕ್ನೋ : ಉತ್ತರಪ್ರದೇಶದ ಕನೌಜ್ ನಲ್ಲಿ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿ ಜೀವಂತವಾಗಿರುವಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಮೊದಲ ಪತ್ನಿಗೆ ಶ್ರಾದ್ಧ ಮಾಡುವ ಮೂಲಕ ನಂಬಿಸಿದ್ದಾನೆ.
ಈಗ ಈತನ ಮೇಲೆ ದ್ವಿಪತ್ನಿತ್ವ ಮತ್ತು ವಂಚನೆ ಆರೋಪ ಹೊರಿಸಲಾಗಿದೆ. ಕನೌಜ್ನ ತಾಳಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿ ಸಾರಾಯಿ ನಿವಾಸಿ ಪವನ ಪಟೇಲ್ ಎಂಬಾತ ತನ್ನ ಎರಡನೇ ಮದುವೆಯನ್ನು ನ್ಯಾಯಸಮ್ಮತಗೊಳಿಸುವ ಸಲುವಾಗಿ ತನ್ನ ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ಹೇಳಿಕೊಂಡು ಆಕೆಗೆ ಶ್ರಾದ್ಧ ಕಾರ್ಯಕ್ರಮ ನಡೆಸಿದ್ದಾನೆ, ಪತ್ನಿ ಸತ್ತಿದ್ದಾಳೆ ಎಂದು ಆಕೆಯ ಮುಂದಿನ ವಿಧಿ ವಿಧಾನಗಳನ್ನು ನೆರವೇರಿಸಿದ್ದಾನೆ. ಆದರೆ ಮತ್ತೊಬ್ಬಳ ಕೊರಳಿಗೆ ತಾಳಿ ಕಟ್ಟುವ ಮೊದಲ ಪ್ರಕರಣಕ್ಕೆ ಪತ್ನಿ ಟ್ವಿಸ್ಟ್ ನೀಡಿದ್ದಾರೆ.
ಮೊದಲ ಹೆಂಡತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತಿ ತನ್ನ ಸಾವನ್ನು ಸುಳ್ಳು ಹೇಳಿ ಬಿಂಬಿಸಿದ್ದು ಮಾತ್ರವಲ್ಲದೆ ತಾನು ಜೀವಂತವಾಗಿರುವಾಗಲೇ ತನ್ನ ಶ್ರಾದ್ಧವನ್ನು (ಸತ್ತವರ ಆಚರಣೆ) ನಡೆಸಿದ್ದಾನೆ ಎಂದು ಹೇಳಿದ್ದಾರೆ. ಪಟೇಲ್ ತಮ್ಮ ಇಬ್ಬರು ಮಕ್ಕಳನ್ನು ತನ್ನಿಂದ ದೂರ ಮಾಡಿದ್ದಾರೆ ಮತ್ತು ತನಗೆ ಸಪೋರ್ಟ್ ಮಾಡದೆ ಹಾಗೆಯೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತನಗೆ ನ್ಯಾಯ ನೀಡುವಂತೆ ಕೋರಿ ಮಹಿಳೆ ಪೊಲೀಸ್ ಸೂಪರಿಂಟೆಂಡೆಂಟ್ ಅವರನ್ನು ಭೇಟಿ ಮಾಡಿದ್ದಾರೆ. ತನ್ನ ಗಂಡನ ಮಾಡಿದ ಈ ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. ಆಕೆಯು ಈ ಹಿಂದೆ ಬೇರೊಬ್ಬ ಮಹಿಳೆಯೊಂದಿಗೆ ಆತನ ಸಂಬಂಧ ಹೊಂದಿದ್ದ ಬಗ್ಗೆ ಆಕೆಗೆ ತಿಳಿದಿತ್ತು.
ಅಕ್ರಮ ಸಂಬಂಧ ಬಿಡುವಂತೆ ಪತ್ನಿ ಮನವಿ ಮಾಡಿಕೊಂಡಿದ್ದಾಳೆ. ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎಂದು ತಿಳಿಹೇಳಿದರೂ ಆತ ಇದನ್ನು ಕೇಳಿರಲಿಲ್ಲ. ಹೀಗಾಗಿ ಆಕೆ ತನ್ನ ಮಕ್ಕಳೊಂದಿಗೆ ಕಾನ್ಪುರದಲ್ಲಿ ತನ್ನ ತವರು ಮನೆಯಲ್ಲಿ ಆಶ್ರಯ ಪಡೆಯಲು ಕಾರಣವಾಯಿತು. ನಂತರ ಪತಿ ಎರಡನೇ ಮದುವೆಗೆ ಮುಂದಾಗಿದ್ದಾನೆ. ತನ್ನ ಅಕ್ರಮ ಸಂಬಂಧ ಸಕ್ರಮ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಪವನ್ ಪಟೇಲ್ ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಪತ್ನಿ ಫೋಟೋ ಇಟ್ಟು ಆಕೆಯ ಶ್ರಾದ್ಧ ಮಾಡಿದ್ದಾನೆ. ಅಲ್ಲದೆ, ಆಕೆಯ ಮಕ್ಕಳ ಅಪಹರಣ ಮಾಡಿದ್ದಾನೆ. ನಂತರ ಪತ್ನಿ ಕಾನೂನು ಮೂಲಕ ಪರಿಹಾರವನ್ನು ಪಡೆಯಲು ಮುಂದಾಗಿದ್ದಾರೆ.