ಬೆಳಗಾವಿ : ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಅಕ್ಟೋಬರ್ 20 ರ ರವಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.45 ರವರೆಗೆ ಪೋಷಕರ ಕಾರ್ಯಾಗಾರ ಏರ್ಪಡಿಸಲಾಗಿದೆ.
ಮಕ್ಕಳನ್ನು ಬೆಳೆಸುವ ಕಲೆ ವಿಷಯವಾಗಿ ಮೈಸೂರು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಮೇಧಾನಂದ ಮಾತನಾಡಲಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ಪ್ರಾರ್ಥನೆ, ನಾಮಸ್ಮರಣೆ ಮತ್ತು ಧ್ಯಾನದ ಪ್ರಾಮುಖ್ಯತೆ ಕುರಿತು ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಮಾತನಾಡುವರು. ಹೆತ್ತವರ ಒತ್ತಡದಲ್ಲಿ ಬಳಲುತ್ತಿರುವ ಬಾಲ್ಯ ವಿಷಯವಾಗಿ ಚಾಮರಾಜನಗರ ದೀನಬಂಧು ಟ್ರಸ್ಟ್ ಸಂಸ್ಥಾಪಕ ಪ್ರೊ. ಬಿ.ಹೆಚ್ .ಜಯಾನಂದ ಮತ್ತು ಮಕ್ಕಳನ್ನು ಮಕ್ಕಳಾಗಿ ನೋಡಿದಾಗ ವಿಷಯವಾಗಿ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಎಚ್.ಎನ್. ಮುರಳೀಧರ ಅವರು ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಪ್ರಕಟಣೆ ತಿಳಿಸಿದೆ.
ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಆಗಮಿಸಿ 132 ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.