ಸ್ಟಡಿ ಮಟಿರೀಯಲ್ ಪುಸ್ತಕಗಳ ರಚನೆ
*9600 ಪಿಯು ವಿದ್ಯಾರ್ಧಿಗಳಿಗೆ ‘ದಿಶಾ’ ಬದಲು*
ಜನಜೀವಾಳಜಾಲ: ಬೆಳಗಾವಿ:ಪಿಯುಸಿ ಫಲಿತಾಂಶದಲ್ಲಿ ನಗರದಲ್ಲಿ ನಿರೀಕ್ಷಿತ ಅಂಕ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಇದನ್ನು ಗಮನಿಸಿ ಸುಧಾರಣಾ ಕ್ರಮವಾಗಿ ಅಭ್ಯಾಸ ಸಾಮಗ್ರಿ ವಿತರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ದಕ್ಷಿಣ ಶಾಸಕ ಅಭಯ ಪಾಟೀಲ
ಬೇರೆ ಬೇರೆ ಜಿಲ್ಲೆಗಳ ಸುಮಾರು 45 ಟೀಚರ್ಸ್/ ಶಿಕ್ಷಣ ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭ್ಯಾಸ ಸಾಮಗ್ರಿಯ ಪುಸ್ತಕಗಳನ್ನು ರಚಿಸಿದ್ದಾರೆ.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಮಟ್ಟ 5ನೇ ಸ್ಥಾನ ಇದ್ದರೆ, ಪಿಯುಸಿ ಫಲಿತಾಂಶ ರೇಟಿಂಗ್ 22ಕ್ಕೆ ಇಳಿದಿದೆ. ಇದನ್ನು ಅವಲೋಕನ ಮಾಡಿದಾಗ ವಿದ್ಯಾರ್ಥಿಗಳಿಗೆ ಉತ್ತಮ ನೋಟ್ಸ್ ಅಭ್ಯಾಸ ಸಾಮಗ್ರಿ ರಚಿಸಿ ಒದಗಿಸಬೇಕು.
ಕಲಾ/ ವಾಣಿಜ್ಯ ವಿಭಾಗಕ್ಕೂ ಉತ್ತಮ ಅಭ್ಯಾಸ ಸಾಮಗ್ರಿ ಸಿಗಬೇಕು ಎಂಬುವುದು ನಮ್ಮ ಆಶಯ ಆದ್ದರಿಂದ ಪ್ರಪ್ರಥಮ ಪ್ರಯತ್ನವಾಗಿ ಈ ಪುಸ್ತಕಗಳನ್ನು ಹೊರತರಲಾಗಿದೆ.
ವಿಜ್ಞಾನ ವಿಭಾಗಕ್ಕೆ ಬೇಕಾದಷ್ಟು ಗುಣಮಟ್ಟದ ಪುಸ್ತಕಗಳು ಪ್ರಸ್ತುತ ಸಿಗುತ್ತವೆ. ಆದರೆ ಕಲಾ ಮತ್ತು ಕಾಮರ್ಸ್ ಗೂ ಕೂಡ ಈಗ ಸ್ಪರ್ಧಾತ್ಮಕ ಪರೀಕ್ಷೆಗಳು ಬರುತ್ತಿವೆ, ಈ ಎರಡು ವಿಭಾಗಗಳಲ್ಲೂ ಉತ್ತಮ ಫಲಿತಾಂಶ ಸಿಗಬೇಕು . ಪಿಯು ಬೋರ್ಡ್ ಗೈಡ್ ಲೈನ್ಸ್ ಮತ್ತು ಪಠ್ಯಕ್ರಮ ಹಾಗೂ ಪರೀಕ್ಷೆ ನಡೆಸುವ ಅದರ ಪದ್ಧತಿ ಅಡಿಯೇ ಈ ಸಾಮಗ್ರಿ ರಚಿಸಲಾಗಿದೆ.
ಬೆಳಗಾವಿ ದಕ್ಷಿಣ-ಉತ್ತರ- ಗ್ರಾಮೀಣ ಭಾಗದ ಒಟ್ಟು 9600 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದu. ಈ ಸಾಮಗ್ರಿಗಳನ್ನು ಉಚಿತವಾಗಿ ಪಿಯು ವಿದ್ಯಾರ್ಥಿಗಳಿಗೆ ಬೆಳಗಾವಿ ನಗರದ ಉತ್ತರ & ದಕ್ಷಿಣ ಕ್ಷೇತ್ರದ ಶಾಶಕದ್ವಯರ ನೇತೃತ್ವದಲ್ಲಿ ‘ದಿಶಾ’ ಕಾರ್ಯಕ್ರಮದ ಅಡಿ ವಿತರಿಸಲಾಗುತ್ತಿದೆ ಎಂದರು.
ಸದ್ಯಕ್ಕೆ ಇಂಗ್ಲೀಷ್ ಮಾಧ್ಯಮದಲ್ಲಿ ಮಾತ್ರ ಅಭ್ಯಾಸ ಪಠ್ಯಕ್ರಮ ಸಾಮಗ್ರಿ ರಚಿಸಲಾಗಿದೆ.
1666 ಕಲಾ,
3784 ವಾಣಿಜ್ಯ,
3913 ವಿಜ್ಞಾನ ವಿದ್ಯಾರ್ಥಿಗಳು ಇದ್ದಾರೆ ಎಂದರು.
ಟ್ಯೂಶನ್ ಮಾಫಿಯಾ ನಿಲ್ಲಬೇಕು:
ಪಿಯುಸಿ ಉಪನ್ಯಾಸಕರ ಕಲಿಸುವ ಗುಣಮಟ್ಟ ಸುಧಾರಿಸಬೇಕು, ಟ್ಯೂಶನ್ ಮಾಫಿಯಾ ತತಕ್ಷಣ ಬಂದಾಗಬೇಕು ಎಂಬ ಬಗ್ಗೆಯೂ ಗಂಭೀರವಾಗಿ ವಿಚಾರಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ಉತ್ತರ ಶಾಸಕ ಅನಿಲ ಬೆನಕೆ, ಮಹಾಂತೇಷ ಪಾಟೀಲ, ಶ್ರೀರಂಗ ದೇಶಪಾಂಡೆ, ಅಶುತೋಷ ಇತರರು ಉಪಸ್ಥಿತರಿದ್ದರು.