ಸವದತ್ತಿ :
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿಗಾಗಿ ದುಡಿಯುತ್ತ ಬಂದಿರುವ ಸವದತ್ತಿಯ ಪ್ರತಿಷ್ಠಿತ ಚಂದರಗಿ ಮನೆತನದ ಯುವ ನಾಯಕ ರುದ್ರಣ್ಣ ಚಂದರಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕಾರ್ಯಕರ್ತರಿಂದ ವ್ಯಕ್ತವಾಗಿದೆ.
ಸುರೇಶ ಅಂಗಡಿ, ಬಾಬಾಗೌಡ ಪಾಟೀಲ ಅವರ ಗೆಲುವಿಗೆ ಸವದತ್ತಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಮತ ನೀಡಲು ಮನವಿ ಮಾಡಿದವರು ರುದ್ರಣ್ಣ ಚಂದರಗಿ ಹಾಗೂ ಅವರ ತಂದೆ ಸಿದ್ದಪ್ಪ ಚಂದರಗಿ ಅವರು. ಸವದತ್ತಿ ತಾಲೂಕಿನ ಪ್ರತಿಷ್ಠಿತ ಇಟ್ನಾಳ ಮನೆತನದಿಂದ ಬಂದಿರುವ ರುದ್ರಣ್ಣ ಚಂದರಗಿ ಅವರು ಬೆಳಗಾವಿಯಲ್ಲಿ ಪತ್ರಿಕೋದ್ಯಮ ಸೇರಿ ನಂತರ ಉದ್ಯಮಿಯಾಗಿ ಸಮಾಜದಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಂಡವರು.
ಆರ್ ಎಸ್ ಎಸ್ ಹಾಗೂ
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಾಗಿ ಸಕ್ರಿಯವಾಗಿ ದುಡಿಯುತ್ತ ಬಂದವರು.
ಬೆಳಗಾವಿ ನಗರದಲ್ಲಿ ನೆಲೆಯೂರಿದ್ದರೂ ಇಂದಿಗೂ ರುದ್ರಣ್ಣ ಚಂದರಗಿ ಅವರು ತಮ್ಮ ಮೂಲ ಸವದತ್ತಿ ತಾಲೂಕಿನ ಜತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ತಾಲೂಕಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ತೆರಳಿ ಜನ ಸಾಮಾನ್ಯರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ.
ಸಾಹಿತ್ಯಿಕ, ಸಾಂಸ್ಕೃತಿಕ, ಯುವಕ ಸಂಘಟನೆಗಳು, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ಸಮಾಜ ಸೇವಾ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತ ಬಂದಿದ್ದಾರೆ.
ಬಿಜೆಪಿಯ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ರುದ್ರಣ್ಣ ಚಂದರಗಿ ಅವರ ಸೇವೆ ಗಮನಿಸಿ ಬಿಜೆಪಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸವದತ್ತಿ ಮತಕ್ಷೇತ್ರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಹಾಗೂ ನಾಯಕರು ಪಕ್ಷದ ವರಿಷ್ಠರಿಗೆ ಹಕ್ಕೊತ್ತಾಯ ಮಾಡಿದ್ದಾರೆ. ಅವರ ಪಕ್ಷ ನಿಷ್ಠೆಗೆ ಬಿಜೆಪಿ ಆದ್ಯತೆ ನೀಡುತ್ತದೋ ಕಾದು ನೋಡಬೇಕು.qa