ಬೆಳಗಾವಿ: ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಜೈನ ಎಂಜನಿಯರಿAಗ್ ಕಾಲೇಜು ಆವರಣದಲ್ಲಿ ಗಣೇಶ ದೇವಾಲಯ ಕುರಿತು ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಹಾನಿಕಾರಕ ಸುಳ್ಳ ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ಇದು ಅಸತ್ಯದಿಂದ ಕೂಡಿದ್ದು, ಜೆಜಿಐ ಸಂಸ್ಥೆ ಸಾಮಾಜಿಕ, ಧಾರ್ಮಿಕ ಯಾವುದೇ ವಿಷಯಗಳನ್ನು ಗೌರವಿಸುತ್ತ, ಎಲ್ಲರ ಹಿತಾಸಕ್ತಿಗಳಿಗೆ ಬದ್ಧವಾಗಿ ನಡೆದು ಬಂದಿದೆ ಎಂದು ಜೈನ ಎಂಜನಿಯರಿ0ಗ್ ಕಾಲೇಜಿನ ಪ್ರಾಚಾರ್ಯ ಡಾ. ಜೆ. ಶಿವಕುಮಾರ ತಿಳಿಸಿದ್ದಾರೆ.
ಜೈನ ಸಮೂಹ ಸಂಸ್ಥೆ ವಿವಿಧ ಕೋಸ್ಗಳನ್ನು ಒಳಗೊಂಡ ಬೃಹತ್ ಶಿಕ್ಷಣ ಸಂಸ್ಥೆಯಾಗಿದ್ದು, ಶೈಕ್ಷಣಿಕ ಗುಣಮಟ್ಟ ಮತ್ತು ಅದರ ಪಾವಿತ್ರö್ಯಯೆನ್ನು ಕಾಯ್ದುಕೊಂಡು ಬಂದಿದೆ. ಎಂಜನಿಯರಿ0ಗ್ ಕಾಲೇಜು ಕಳೆದ ೧೪ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಐಸಿಟಿ ಅನಮೋದಿತ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅನುಮೋದನೆ ಪಡೆದು, ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಂಡು ಗುರುತರ ಸಾಧನೆ ಮಾಡುತ್ತ ಬಂದಿದೆ. ಸಂಸ್ಥೆಯಲ್ಲಿ ಓದಿದ ವಿದಾರ್ಥಿಗಳು ಹೊರ ಜಗತ್ತಿನ ಗುರುತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವ್ಯಕ್ತಿತ್ವ ಸಾಧನೆಯೊಂದಿಗೆ ಸಮಾಜದಲ್ಲಿ ಗೌರನ್ವಿತ ಸ್ಥಾನ ಹೊಂದಿದ್ದಾರೆ. ಯಾವುದೇ ಕಪ್ಪುಚುಕ್ಕೆಗೆ ಒಳಗಾಗದೇ ಶೈಕ್ಷಣಿಕ ಸಾಧನೆಯನ್ನು ಕೇಂದ್ರವನ್ನಾಗಿರಿಸಿಕೊ0ಡು ವಿದ್ಯಾರ್ಥಿಗಳು, ಶಿಕ್ಷಣಕರು ಹಾಗೂ ಆಡಳಿತ ಮಂಡಳಿ ಮಧ್ಯ ಅವಿನಾಭಾವ ಕಾಯ್ದುಕೊಂಡು ಬಂದಿದೆ. ಯವುದೇ ಸಂಸ್ಥೆ ಹಾಗೂ ಯಾರ ಹಿತಾಸಕ್ತಿಗೆ ಧಕ್ಕೆ ತರುವ ಕಾರ್ಯನಿರ್ವಹಿಸಿಲ್ಲ. ಎಂಜನಿಯರಿAಗ್ ಕಾಲೇಜಿನಲ್ಲಿ ಎರಡು ಗಣೇಶ ದೇವಾಲಯಗಳಿದ್ದು, ಯಾವತ್ತೂ ಭಕ್ತಿಯಿಂದ ನಿತ್ಯ ಪೂಜೆ ನೆರವೇರಿಸಲಾಗುತ್ತದೆ. ಪೂಜಾ ಸಮಯದಲ್ಲಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ.
ವಸ್ತುಸ್ಥಿತಿ ಹೀಗಿರಬೇಕಾದರೆ, ಸಂಸ್ಥೆಗೆ ಕೆಟ್ಟು ಹೆಸರು ತರುವ ದುರುದ್ದೇಶಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳ ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ಹಾಗೇನಾದರೂ ಕಂಡುಬ0ದರೆ ಸಂಸ್ಥೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರಾಚಾರ್ಯ ಡಾ. ಜೆ. ಶಿವಕುಮಾರ ತಿಳಿಸಿದ್ದಾರೆ.