ಆಗ್ರಾ : ಮೊಬೈಲ್ ಕರೆ ವಂಚನೆಗಳು ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ವಂಚನೆ ಕಾಲ್ ಮಹಿಳೆಯೊಬ್ಬರ ಜೀವವನ್ನೇ ಆಹುತಿ ತೆಗೆದುಕೊಂಡ ಘಟನೆ ವರದಿಯಾಗಿದೆ.
ಆಗ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ಪೊಲೀಸ್ ಅಧಿಕಾರಿ ಫೋಟೋ ಪೋಸಿನಲ್ಲಿದ್ದ ವ್ಯಕ್ತಿಯಿಂದ ವಾಟ್ಸಾಪ್ ಕರೆ ಸ್ವೀಕರಿಸಿದ್ದಾರೆ. ತನ್ನ ಕಾಲೇಜಿಗೆ ಹೋಗುತ್ತಿರುವ ಮಗಳು ಸೆಕ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ಕರೆ ಮಾಡಿದ ವ್ಯಕ್ತಿ ಶಿಕ್ಷಕಿಗೆ ತಿಳಿಸಿದ್ದಾನೆ.
ಮಾಲ್ತಿ ವರ್ಮಾ ಅವರ ಮಗ ದೀಪಾಂಶು ಮಾತನಾಡಿ, ಮಧ್ಯಾಹ್ನದ ವೇಳೆಗೆ ಕರೆ ಬಂದಿದ್ದು, ಮಗಳು ಸುರಕ್ಷಿತವಾಗಿ ಮನೆಗೆ ಬರುವುದನ್ನು ಪಾತ್ರಿಪಡಿಸಿಕೊಳ್ಳಲು ₹ 1 ಲಕ್ಷವನ್ನು ನಿರ್ದಿಷ್ಟ ಖಾತೆಗೆ ಜಮಾ ಮಾಡುವಂತೆ ಆ ವ್ಯಕ್ತಿ ಸೂಚಿಸಿದ್ದಾನೆ ಎಂದು ತಿಳಿಸಿದ್ದಾರೆ.
ತಮ್ಮ ಮಗಳು ಸೆಕ್ಸ್ ಜಾಲದಲ್ಲಿ ಸಿಲುಕಿರುವ ಆಘಾತದಲ್ಲಿ ಕುಟುಂಬವು ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ತಾನು ಆಕೆಗೆ ಕರೆ ಮಾಡುತ್ತಿದ್ದೇನೆ ಎಂದು ಕರೆಮಾಡಿದ ಆ ವ್ಯಕ್ತಿ ಶಿಕ್ಷಕಿ ವರ್ಮಾಗೆ ತಿಳಿಸಿದ್ದಾನೆ.
“ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿರುವ ಸರ್ಕಾರಿ ಬಾಲಕಿಯರ ಜೂನಿಯರ್ ಹೈಸ್ಕೂಲ್ನಲ್ಲಿ ಪಾಠ ಮಾಡುತ್ತಿದ್ದರು. ಆ ವ್ಯಕ್ತಿಯಿಂದ ಕರೆ ಬಂದ ನಂತರ ಅವರು ಗಾಬರಿಗೊಂಡು ನನಗೆ ಕರೆ ಮಾಡಿದರು ಮತ್ತು ಅವರು ಕರೆ ಸ್ವೀಕರಿಸಿದ ಸಂಖ್ಯೆಯನ್ನು ನಾನು ಕೇಳಿದೆ. ನಾನು ಆ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ಮೋಸದ ಕರೆ ಎಂದು ನಾನು ಕಂಡುಕೊಂಡೆ ಮತ್ತು ಅವರಿಗೆ ಇದು ವಂಚನೆಯ ಕರೆ ಎಂದು ಹೇಳಿದೆ. ಆದರೆ ತಾಯಿ ಇನ್ನೂ ತುಂಬಾ ಆತಂಕದಲ್ಲಿದ್ದರು. ಮತ್ತು ಶಾಕ್ನಿಂದ ಅಸ್ವಸ್ಥಗೊಂಡಿದ್ದರು ಎಂದು ದೀಪಾಂಶು ಹೇಳಿದರು.
“ನಾನು ಅವರನ್ನು ಸಮಾಧಾನಪಡಿಸಿದೆ. ನಾನು ಸಹೋದರಿಯೊಂದಿಗೆ ಮಾತನಾಡಿದ್ದೇನೆ, ಕಾಲೇಜಿನಲ್ಲಿದ್ದಾರೆ ಎಂದು ಹೇಳಿದೆ, ಆದರೆ ಆಘಾತದಿಂದ ನನ್ನ ತಾಯಿಯ ಆರೋಗ್ಯವು ಹದಗೆಡುತ್ತಲೇ ಇತ್ತು, ಆದರೆ ಅವರು ಶಾಲೆಯಿಂದ ಹಿಂತಿರುಗಿದಾಗ, ಅವರು ಸ್ವಲ್ಪ ನೋವಾಗುತ್ತಿದೆ ಎಂದು ಹೇಳಿದರು. ನಾವು ತಾಯಿಗೆ ಕುಡಿಯಲು ನೀಡಿದೆವು, ಆದರೆ ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನಂತರ ಅವರು ತಕ್ಷಣವೇ ಮೃತಪಟ್ಟರು ”ಎಂದು ದೀಪಾಂಶು ಹೇಳಿದರು.
ಕುಟುಂಬದವರು ಗುರುವಾರ ದೂರು ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ತಿಳಿಸಿದ್ದಾರೆ. ಶಿಕ್ಷಕಿ ಮಾಲ್ತಿ ವರ್ಮಾ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಇದಕ್ಕೆ ಕಾರಣ, ಅವರಿಗೆ ನಿಮ್ಮ ಮಗಳು ಸೆಕ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ತಿಳಿಸುವ ಕರೆ ಬಂದಿತ್ತು ಮತ್ತು ಕರೆ ಮಾಡಿದವರು ₹ 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಅವರ ಪತಿ ಹೇಳಿದ್ದಾರೆ. ಇದರಿಂದ ಆಕೆ ಚಿಂತಿತಳಾದಳು, ನಂತರ ಆಘಾತದಿಂದಲೇ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.