ಹುದಲಿ,ಮೋದಗಾ,ಹೊನ್ನಿಹಾಳ, ಖನಗಾಂವ ಗ್ರಾಮಗಳಲ್ಲಿ ಕಳ್ಳತನ ಮಾಡುತಿದ್ದ ಕಿಲಾಡಿ ಕಳ್ಳನನ್ನು ಹಿಡಿದ ಮಾರಿಹಾಳ ಪೊಲೀಸರು..!
ಚಂದೂರ ಕರಕಾಳಿಗೆ ಕೊಳ ತೊಡಿಸಿದ PI ಕಲ್ಯಾಣಶೆಟ್ಟಿ ಟಿಂ..!
ಬೆಳಗಾವಿ : ಮಾರಿಹಾಳ ಪೊಲೀಸ ಠಾಣಾ ಹದ್ದಿಯ ಮೋದಗಾ, ಹೊನ್ನಿಹಾಳ, ಹುದಲಿ, ಖನಗಾಂವ ಕೆಎಚ್ ಗ್ರಾಮಗಳಲ್ಲಿ ಮನೆ ಕಳ್ಳತನ ಮಾಡುತಿದ್ದ ಕಿಲಾಡಿ ಕಳ್ಳನನ್ನು ಮಾರಿಹಾಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಅಪರಾಧ ಸಂಖ್ಯೆಗಳಾದ 1] 60/2023, 2] 77/2023, 3] 78/2023, 4] 03/2024, 5] 73/2024 ನೇ ಪ್ರಕಣಗಳಲ್ಲಿ ಒಟ್ಟು ಕಳ್ಳತನವಾದ 7.80,000/- ರೂ ಕಿಮ್ಮತ್ತಿನ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಕಳ್ಳತನ ಮಾಡಲು 02 ಬೈಕ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿ ಎ-1 ಬಸಪ್ಪ @ ಪರಾರಿ ಬಸ್ಯಾ ಮಾರುತಿ ಕರಕಾಳಿ, ವಯಾ: 36 ವರ್ಷ ಸಾ: ಚಂದೂರ ತಾ:ಜಿ: ಬೆಳಗಾವಿ ಇತನನ್ನು ಮಾರಿಹಾಳ ಪೊಲೀಸರು ಬಂಧಿಸಿ, ಇತನಿಂದ ಕದ್ದ ಮಾಲನ್ನು ವಶಕ್ಕೆ ಪಡೆದುಕೊಂಡು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿ ಹಿಂಡಲಗಾ ಜೈಲಗಟ್ಟಿದ್ದಾರೆ.
ಈ ಪ್ರಕರಣದ ಆರೋಪಿ ಮತ್ತು ಕಳ್ಳತನ ಮಾಡಿದ ಮಾಲಿನ ಪತ್ತೆಗಾಗಿ ಎರಡು ತಂಡಗಳಾಗಿ ರಚಿಸಿ ತನಿಖೆ ಕೈಕೊಂಡಾಗ ಆರೋಪಿ ದಿನಾಂಕ 02-10-2024 ರಂದು ಬೆಳಗಿನ ಜಾವ ಮುಂಜಾನೆ 05:50 ಗಂಟೆಯ ಸುಮಾರಿಗೆ ಸುಳೇಭಾವಿ-ಖನಗಾಂವ ರಸ್ತೆಯಲ್ಲಿರುವ ರೇಲ್ವೇ ಓವರ್ ಬ್ರಿಡ್ಜ್ ಹತ್ತಿರ ಅನುಮಾನಸ್ಪದವಾಗಿ ಒಬ್ಬ ವ್ಯಕ್ತಿ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಮನೆ ಕಳ್ಳತನ ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿದ್ದಲ್ಲದೇ ಆತನು ಮಾರಿಹಾಳ ಪೊಲೀಸ ಠಾಣೆಯ ವಿವಿಧ ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಬಸಪ್ಪ @ ಪರಾರಿ ಬಸ್ಯಾ ಮಾರುತಿ ಕರಕಾಳಿ ಈತನಿಂದ ಕಳ್ಳತನ ಮಾಡಿದ ಸುಮಾರು 6,30,000/-ರೂ ಕಿಮ್ಮತ್ತಿನ ಬಂಗಾರದ ಮತ್ತು 50,000/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗಳನ್ನು ಜಪ್ತ ಮಾಡಿ ವಶಪಡಿಸಿಕೊಂಡಿದ್ದಾರೆ.
ಮಾರಿಹಾಳ ಪಿಐ ಗುರುರಾಜ ಕಲ್ಯಾಣಶೆಟ್ಟಿ ಮಾರ್ಗದರ್ಶನಲ್ಲಿ ಪಿಎಸ್ಐ ಮಂಜುನಾಥ, ನಾಯಕ ನೇತೃತ್ವದಲ್ಲಿ ಚಂದ್ರಶೇಖರ, ಸಿ, ಪಿಎಸ್ಐ-2 ಹಾಗೂ ಸಿಬ್ಬಂದಿ ಜನರಾದ ಸಿಎಚ್ಸಿ ಬನಂ 1048 ಬಿ. ಎನ್. ಬಳಗನ್ನವರ, ಸಿಎಚ್ಸಿ ಬನಂ: 1091 ಬಿ. ಬಿ. ಕಡ್ಡಿ, ಸಿಪಿಸಿ ಬನಂ: 1409 ಹನಮಂತ ಯರಗುದ್ರಿ, ಸಿಪಿಸಿ ಬನಂ: 1470 ಟಿ. ಜಿ. ಸುಳಕೋಡ, ಸಿಪಿಸಿ ಬನಂ: 1575 ಚನ್ನಪ್ಪಾ ಹುಣಚ್ಯಾಳ, ಸಿಪಿಸಿ ಬನಂ: 1950 ಆರ್. ಎಚ್. ತಳವಾರ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂಧಿ ಸಿಎಚ್ಸಿ ಬನಂ: 1158 ರಮೇಶ ಅಕ್ಕಿ, ಇವರು ಕಾರ್ಯಚರಣೆ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ಯಡಾಮಾರ್ಟಿನ ಮಾರ್ಬನ್ಯಾಂಗ. ಮಾನ್ಯ ಪೊಲೀಸ ಆಯುಕ್ತರು. ರೋಹನ ಜಗದೀಶ, ಡಿಸಿಪಿ (ಕಾ&ಸು) ನಿರಂಜನ ರಾಜೆ ಅರಸ, ಡಿಸಿಪಿ (ಅಪರಾಧ ಮತ್ತು ಸಂಚಾರ), ಗಂಗಾಧರ ಬಿ ಎಮ್, ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಬೆಳಗಾವಿ, ರವರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ