ಬೆಳಗಾವಿ : ಬಿಎಸ್ಎಫ್ ಯೋಧ ಚಾಕು ಇರಿದ ಘಟನೆ ಬೆಳಗಾವಿ ಎಪಿಎಂಸಿ ರಸ್ತೆಯ ಆಯಿ ಹೋಟೆಲ್ ನಲ್ಲಿ ನಡೆದಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಯಲ್ಲಿ ಯೋಧನು ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ. ರುಕ್ಮಿಣಿ ನಗರದ ಪರಶುರಾಮ ರಾಮಗೊಂಡನವರ ಊಟಕ್ಕೆ ಹೊಟೇಲ್ ಗೆ ಬಂದಿದ್ದ. ಬಿಎಸ್ಎಫ್ ಯೋಧನಾಗಿರುವ ಈತ ಅಲ್ತಾಫ್ ಗೆ ಇರಿದಿದ್ದು, ಈಗ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಟೆಲಿಗೆ ಗ್ಯಾಂಗ್ ವಾಡಿಯ ಯುವಕರು ಊಟಕ್ಕೆ ಬಂದಿದ್ದರು. ಹೋಟೆಲ್ ಮಾಲೀಕನ ಜೊತೆ ಜಗಳವಾಡಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲೇ ಇದ್ದ ಪರಶುರಾಮ ಹಾಗೂ ಯುವಕರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.