ನವದೆಹಲಿ: ಬಾಂಗ್ಲಾದೇಶ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟಿ 20 ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಯುವ ವೇಗಿ ಮಯಾಂಕ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಕೆಕೆಆರ್ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಸುಮಾರು ಮೂರು ವರ್ಷಗಳ ನಂತರ ಟಿ 20 ಪಂದ್ಯಾವಳಿಗೆ ಪುನರಾಗಮನ ಮಾಡುತ್ತಿದ್ದಾರೆ. ಟೆಸ್ಟ್ ಸರಣಿ ಮುಗಿದ ನಂತರ ಬಾರತವು ಬಾಂಗ್ಲಾದೇಶದ ವಿರುದ್ಧ ಗ್ವಾಲಿಯರ್, ನವದೆಹಲಿ ಮತ್ತು ಹೈದರಾಬಾದ್ನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ” ಎಂದು ಬಿಸಿಸಿಐ ತಿಳಿಸಿದೆ. ಅಕ್ಟೋಬರ್ 6 ರಂದು ಗ್ವಾಲಿಯರ್ನಲ್ಲಿ ನಡೆಯಲಿರುವ ಮೊದಲ ಪಂದ್ಯದೊಂದಿಗೆ ಭಾರತ ಸರಣಿಯನ್ನು ಪ್ರಾರಂಭಿಸಲಿದೆ.
ಸೂರ್ಯಕುಮಾರ ಯಾದವ್ ತಂಡಕ್ಕೆ ನಾಯಕರಾಗಿದ್ದು, ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾಗೆ ತಂಡದಲ್ಲಿ ಇಲ್ಲ. ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ತಂಡದ ಇಬ್ಬರು ವಿಕೆಟ್ ಕೀಪರ್ಗಳು ಇದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತದ ತಂಡದ 15 ಸದಸ್ಯರ ಈ ಬಳಗದಲ್ಲಿ ಆರು ಆಲ್ರೌಂಡರ್ಗಳಿರುವುದು ವಿಶೇಷ. ಇನ್ನು ವಿಕೆಟ್ ಕೀಪರ್ಗಳಾಗಿ ಇಬ್ಬರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಪರಿಪೂರ್ಣ ಬ್ಯಾಟ್ಸ್ಮನ್ ಗಳಾಗಿ ಆಯ್ಕೆಯಾಗಿರುವುದು ಕೇವಲ ಇಬ್ಬರು ಮಾತ್ರ.
ಇಲ್ಲಿ ಪರಿಪೂರ್ಣ ಬ್ಯಾಟರ್ಗಳಾಗಿ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಗಳಾಗಿ ಸಂಜು ಸ್ಯಾಟ್ಸನ್ ಹಾಗೂ ಜಿತೇಶ್ ಶರ್ಮಾಗೆ ಸ್ಥಾನ ಲಭಿಸಿದೆ. ಅತ್ತ ಇಶಾನ್ ಕಿಶನ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.
ಇನ್ನು ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಾಗಿದೆ. ಅದೇ ರೀತಿ ಬೌಲರ್ಗಳಾಗಿ ರವಿ ಬಿಷ್ಟೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಮಯಾಂಕ್ ಯಾದವ್ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದರೆ ಈ ಬಾರಿ ಆಯ್ಕೆ ಸಮಿತಿಯು ಹೆಚ್ಚಿನ ಆಲ್ರೌಂಡರ್ಗಳಿಗೆ ಮಣೆಹಾಕಿರುವುದು ಸ್ಪಷ್ಟ. ಅದರಲ್ಲೂ ಯುವ ಆಲ್ರೌಂಡರ್ಗಳಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗೂ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ 2026ರ ಟಿ20 ವಿಶ್ವಕಪ್ಗೆ ಈಗಲೇ ಬಲಿಷ್ಠ ಪಡೆಯನ್ನು ರೂಪಿಸುವ ಕಾಯಕಕ್ಕೆ ಬಿಸಿಸಿಐ ಕೈ ಹಾಕಿದೆ.
ಬಾಂಗ್ಲಾದೇಶ ವಿರುದ್ಧದ 3 ಟಿ20 ಪಂದ್ಯಗಳಿಗೆ ಭಾರತ ತಂಡ: ಸೂರ್ಯಕುಮಾರ ಯಾದವ್ (ನಾಯಕ), ಅಭಿಷೇಕ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶಕುಮಾರ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ, ರವಿ ಬಿಷ್ಣೋಯ್, ವರುಣ ಚಕ್ರವರ್ತಿ, ಜಿತೇಶ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್