ಬೆಂಗಳೂರು: ವೈಯಾಲಿಕಾವಲ್ನಲ್ಲಿ ಯುವತಿಯನ್ನು ಬರ್ಬರವಾಗಿ ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟು ಒಡಿಶಾಗೆ ಪರಾರಿಯಾಗಿದ್ದ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಸಹ ಪತ್ತೆಯಾಗಿದೆ.
ಕೊಲೆ ಆರೋಪ ಹೊತ್ತಿರುವ ಮುಕ್ತಿ ರಂಜನ್ ರಾಯ್ (31) ಒಡಿಶಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಒಡಿಶಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ ಬರೆದಿಟ್ಟ ಡೆತ್ ನೋಟಲ್ಲಿ ಯುವತಿ ಮಹಾಲಕ್ಷ್ಮಿ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಆತ ಬರೆದಿದ್ದಾನೆ. ಮೃತದೇಹದ ಬಳಿ ಪತ್ತೆಯಾದ ಡೆತ್ನೋಟ್ ವೈಯಾಲಿಕಾವಲ್ನಲ್ಲಿರುವ ಮಹಾಲಕ್ಷ್ಮೀ ನಿವಾಸದಲ್ಲಿ ಮುಕ್ತಿ ರಂಜನ್ ಮತ್ತು ಆಕೆಯ ನಡುವೆ ನಡೆದ ತೀವ್ರ ವಾಗ್ವಾದ ನಡೆದ ಬಗ್ಗೆ ವಿವರಿಸುತ್ತದೆ. ಸಿಟ್ಟಿನಲ್ಲಿ ಮುಕ್ತಿ ರಂಜನ್ ಮಹಾಲಕ್ಷ್ಮಿಯ ತಲೆಗೆ ಹೊಡೆದಾಗ ಆಕೆಯ ಸಾವಿಗೆ ಕಾರಣವಾಯಿತು. ಟಿಪ್ಪಣಿಯು ಇಬ್ಬರ ನಡುವಿನ ನಿಕಟ ಸಂಬಂಧದ ಬಗ್ಗೆಯೂ ಹೇಳಿದೆ.
ರಂಜನ್ ಮೃತದೇಹ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಶುರಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಆತನ ಬ್ಯಾಗ್, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಸೇರಿದಂತೆ ಹಲವು ವೈಯಕ್ತಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾಲಕ್ಷ್ಮಿಕೆಲಸ ಮಾಡುತ್ತಿದ್ದ ಬೆಂಗಳೂರಿನ ಮಾಲ್ ಅಂಗಡಿಯೊಂದರಲ್ಲಿ ಮುಕ್ತಿ ರಂಜನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆಕೆಯ ಕರೆ ದಾಖಲೆಗಳು ರಂಜನ್ ಜೊತೆ ಆಗಾಗ್ಗೆ ಮಾತನಾಡುತ್ತಿದ್ದುದನ್ನು ಬಹಿರಂಗಪಡಿಸಿದ್ದವು. ಇದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಯಿತು. ಸೆಪ್ಟೆಂಬರ್ ಆರಂಭದಿಂದ ರಂಜನ್ ನಾಪತ್ತೆಯಾಗಿದ್ದು, ಆತನ ಫೋನ್ ಸ್ವಿಚ್ ಆಫ್ ಆಗಿತ್ತು, ಇದು ಆತ ವಿರುದ್ಧ ಇನ್ನಷ್ಟು ಅನುಮಾನ ಹೆಚ್ಚಲು ಕಾರಣವಾಯಿತು.
29ರ ಹರೆಯದ ಮಹಾಲಕ್ಷ್ಮಿ ಶವವನ್ನು 59 ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ಆಕೆಯ ನಿವಾಸದಲ್ಲಿ ರೆಫ್ರಿಜರೇಟರ್ನಲ್ಲಿ ಸೆಪ್ಟೆಂಬರ್ 21ರಂದು ಪತ್ತೆಯಾಗಿತ್ತು. ಆಕೆಯನ್ನು ಆಯುಧದಿಂದ ಹತ್ಯೆ ಮಾಡಲಾಗಿದ್ದು, ಪೊಲೀಸರು ಇನ್ನೂ ಕೊಲೆಯ ಆಯುಧವನ್ನು ವಶಪಡಿಸಿಕೊಳ್ಳಬೇಕಾಗಿದೆ. ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಸ್ಥಳದಲ್ಲಿ ಕಂಡುಬಂದಿರುವ ಹೊಸ ಪುರಾವೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಮುಕ್ತಿ ರಂಜನ್ ಸಾವು ಹಲವಾರು ಪ್ರಶ್ನೆಗಳಿಗೆ ಉತ್ತರಿಸದೆ ಉಳಿದಿದೆ, ಆದರೆ ಡೆತ್ ನೋಟ್ನಲ್ಲಿ ಆತನ ಸ್ಪಷ್ಟವಾದ ತಪ್ಪೊಪ್ಪಿಗೆಯು ಅಪರಾಧದ ಬಗ್ಗೆ ನಿರ್ಣಾಯಕ ಒಳನೋಟಗಳನ್ನು ನೀಡಿದೆ. ಅಧಿಕಾರಿಗಳು ಮಹಾಲಕ್ಷ್ಮಿ ಹತ್ಯೆಯ ಹಿಂದಿನ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ತನಿಖೆ ನಡೆಸುತ್ತಿದ್ದಾರೆ.
ಸಿಂಗಲ್ ಬೆಡ್ರೂಮ್ ಫ್ಲಾಟ್ನಿಂದ ದುರ್ವಾಸನೆ ಬೀರುತ್ತಿರುವ ಬಗ್ಗೆ ನೆರೆಹೊರೆಯವರು ಎಚ್ಚರಿಸಿದ ನಂತರ ಆಕೆಯ ತಾಯಿ ಮತ್ತು ಸಹೋದರಿ ಮಹಾಲಕ್ಷ್ಮಿಯ ಹುಳವಾಗಿದ್ದ ದೇಹವನ್ನು ರೆಫಿಜರೇಟರ್ನಲ್ಲಿ ಪತ್ತೆ ಮಾಡಿದ್ದರು. . ಆಕೆಯ ದೇಹವನ್ನು ಸುಮಾರು 59 ತುಂಡುಗಳಾಗಿ ಕತ್ತರಿಸಿ 165 ಲೀಟರ್ ರೆಫ್ರಿಜರೇಟರ್ನಲ್ಲಿ ಇರಿಸಲಾಗಿತ್ತು.