ಬೆಳಗಾವಿ : ಯರಗಟ್ಟಿ ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಯರಗಟ್ಟಿಯ ಹನುಮಂತ ಭಜಂತ್ರಿ ಸೊಪ್ಪಡ್ಲದ ಮನೀಷ ಗೌಡರ ಬಂಧಿತರು. ಬೈಲಹೊಗಲದ ಸಚಿನ್ ಪುರಾಣಿಕಮಠ (36) ಗಾಯಗೊಂಡವರು. ಬೈಲಹೊಂಗಲದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಸಚಿನ, ಯರಗಟ್ಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಸಚಿನ್ ಅವರ ಮೊಬೈಲ್ ಕಸಿದುಕೊಂಡು ಹೋದ. ಮೊಬೈಲ್ ಕೊಡಿಸುವುದಾಗಿ ಇನ್ನಿಬ್ಬರು ಸೊಪ್ಪಡ್ಲಕ್ಕೆ ಅವರನ್ನು ಕರೆದೊಯ್ದರು. ಅಲ್ಲಿ ಮೊಬೈಲ್ ವಾಪಸ್ ಕೊಡುವ ವಿಚಾರವಾಗಿ ಗಲಾಟೆಯಾಗಿದ್ದು ಸಚಿನ್ ಅವರಿಗೆ ಚಾಕು ಇರಿಯಲಾಗಿದೆ. ತನಿಖೆ ನಡೆದಿದೆ ಎಂದು ಮುರಗೋಡ ಸಿಪಿಐ ಈರಯ್ಯ ಮಠಪತಿ ತಿಳಿಸಿದ್ದಾರೆ.