ಬೆಳಗಾವಿ: ಮಗುವಿಗೆ ಹುಷಾರಿಲ್ಲ, ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡರೂ ಪೊಲೀಸರ ಮನ ಕರಗಲೇ ಇಲ್ಲ.
ಅಸ್ವಸ್ಥಗೊಂಡಿದ್ದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪದ ಮಗುವನ್ನು ಪೋಷಕರು ಮಂಗಳವಾರದಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಿಂದಾಗಿ ಅವರು ತಮ್ಮ ವಾಹನವನ್ನು ಬೆಳಗಾವಿ ಮಹಾನಗರದಲ್ಲಿ ತಂದರೂ ಮುಂದೆ ಚಲಾಯಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಆಸ್ಪತ್ರೆಗೆ ತಲುಪಲು ಫೋರ್ಟ್ ರಸ್ತೆಯಿಂದ ನಡೆದುಕೊಂಡು ಹೋಗಬೇಕಾಯಿತು. ಕಾರಿನಲ್ಲಿದ್ದ ಕಾರಣ ಪೊಲೀಸರಿಗೆ ಮನವಿ ಮಾಡಿದ ನಂತರವೂ ಅವರು ಒಪ್ಪಲೇ ಇಲ್ಲ. ಕಿರ್ಲೋಸ್ಕರ್ ರಸ್ತೆಯವರೆಗೂ ನಡೆದುಕೊಂಡು ಹೋಗಬೇಕಾಯಿತು.
ಮಗುವನ್ನು ಪೋಷಕರು ಕೈಯಲ್ಲಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಎಂಥವರ ಕರುಳು ಹಿಂಡುತ್ತಿತ್ತು. ಆದರೆ, ಪೊಲೀಸರ ಪಾಲಿಗೆ ಮಗುವಿನ ಅನಾರೋಗ್ಯ ಮಾತ್ರ ದೊಡ್ಡ ಸಂಗತಿಯಾಗದೇ ಇರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.