ದೆಹಲಿ : ಇನ್ನೆರಡು ದಿನಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಭ್ರಷ್ಟಾಚಾರ ಹಗರಣದಲ್ಲಿ ಜಾಮೀನು ಮೂಲಕ ಜೈಲಿನಿಂದ ಹೊರಬಂದ ನಂತರ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜನ ನನಗೆ ಪ್ರಾಮಾಣಿಕರು ಎಂಬ ಪ್ರಮಾಣ ಪತ್ರ ನೀಡಿದ ನಂತರ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವೆ. ಜೈಲಿನಿಂದ ಹೊರಬಂದ ನಂತರ ಈಗ ನಾನು ಅಗ್ನಿಪರೀಕ್ಷೆಗೆ ಒಳಪಡುತ್ತಿದ್ದೇನೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ನಡೆಯಲಿದೆ. ಆದರೆ, ಮಹಾರಾಷ್ಟ್ರದಲ್ಲಿ ನವೆಂಬರ್ ನಲ್ಲಿ ಚುನಾವಣೆ ನಡೆಸಲು ಒತ್ತಾಯಿಸುವೆ. ಬಿಜೆಪಿ ನನ್ನನ್ನು ಭ್ರಷ್ಟ ಎಂದು ತೋರಿಸಲು ಪ್ರಯತ್ನಿಸಿತು. ಆದರೆ ಕೇಸರಿ ಪಾಳಯ ಭ್ರಷ್ಟರಾಗಿರುವ ಕಾರಣಕ್ಕೆ ಮಕ್ಕಳಿಗೆ ಉತ್ತಮ ಶಾಲೆ, ಉಚಿತ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಅವರು ಬಿಜೆಪಿಯೇತರ ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಕೇಸ್ ಹಾಕುತ್ತಾರೆ. ಅಂತ ಸಂದರ್ಭದಲ್ಲಿ ರಾಜೀನಾಮೆ ನೀಡದೆ ಜೈಲಿನಿಂದ ಸರ್ಕಾರವನ್ನು ನಡೆಸುವಂತೆ ಅವರಿಗೆ(ಆರೋಪ ಹೊತ್ತವರಿಗೆ) ಒತ್ತಾಯಿಸುತ್ತೇನೆ. ಸಂವಿಧಾನ ನನಗೆ ಸರ್ವೋಚ್ಚ. ಬಿಜೆಪಿಯ ಪಿತೂರಿ ಎದುರಿಸಲು ನಮ್ಮ ಪಕ್ಷ ಸಮರ್ಥವಾಗಿದೆ. 2014ರಲ್ಲಿ ಜನಲೋಕಪಾಲ ಮಸೂದೆಗೆ ಸಂಬಂಧಿಸಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದೆ. ಕೇವಲ 49 ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ನೀಡಿದ್ದನ್ನು ಉಲ್ಲೇಖಿಸಿ ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ ಎಂದು ಹೇಳಿದ್ದಾರೆ.