- ವಾಣಿಜ್ಯ ತೆರಿಗೆ ಇಲಾಖೆಗೆ ನೂತನ ಜಂಟಿ ಆಯುಕ್ತ ಎಂ. ಜಿ. ರಮೇಶ್ ಬಾಬು
- ಜಂಟಿ ಆಯುಕ್ತ ಆರ್ ಡಿ ಮೇಘಣ್ಣವರ ಬೆಂಗಳೂರಿಗೆ ವರ್ಗಾವಣೆ
- ಅದ್ದೂರಿಯಾಗಿ ಬೀಳ್ಕೊಡುಗೆ – ಸ್ವಾಗತ
ಜನ ಜೀವಾಳ ಜಾಲ: ಬೆಳಗಾವಿ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಜಂಟಿ ಆಯುಕ್ತರ ವರ್ಗಾವಣೆಯಾಗಿದ್ದು, ಬೆಳಗಾವಿ ನೂತನ ಜಂಟಿ ಆಯುಕ್ತರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಡಳಿತ ವಿಭಾಗದ ಜಂಟಿ ಆಯುಕ್ತ ಎಂ. ಜಿ. ರಮೇಶ್ ಬಾಬು ಅವರನ್ನು ಬೆಳಗಾವಿ ಜಾರಿಯ ಜಂಟಿ ಆಯುಕ್ತರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು; ಅಕ್ಟೋಬರ್ ೨೮ ರಂದು ಅಧಿಕಾರ ಸ್ವೀಕರಿಸಿದರು.
ಬೆಳಗಾವಿಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಿಭಾಗೀಯವಾಗಿ ಹೆಚ್ಚಿನ ಜಿಎಸ್ಟಿ ಸಂಗ್ರಹಿಸಿ ಹೆಸರು ಗಳಿಸಿದ್ದ ಜಾರಿ ವಿಭಾಗದ ಜಂಟಿ ಆಯುಕ್ತ ಆರ್. ಡಿ ಮೇಘಣ್ಣವರ ಅವರನ್ನು ಬೆಂಗಳೂರಿನ ಜಂಟಿ ಆಯುಕ್ತರು ಮನವಿಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಇದೇ ವೇಳೆ ಆಡಳಿತ ವಿಭಾಗದ ಜೆ ಸಿ ಶ್ರೀಮತಿ ಯಾಸ್ಮಿನ್ ವಾಲೀಕಾರ ಅಧ್ಯಕ್ಷತೆಯಲ್ಲಿ ಡಿ.ಸಿ. ಶ್ರೀಶೈಲ ಬಿದರಕುಂದಿ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಜಾರಿ ಗೋಕಾಕದ ವೆಂಕಟೇಶ್, ಜಾರಿ ವಿಭಾಗದ ಪತ್ರಾಂಕಿತ ವ್ಯವಸ್ಥಾಪಕ ರಮೇಶ ಎಸ್. ಯಲಿಗಾರ, ಸಿ-ಡಿ ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ವೇಳೆ ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆ ಎ.ಸಿಗಳಾದ ಶುಂಠೆ, ವೆಂಕಟೇಶ್, ಡಬ್ಬು ಗೋಳ, ಹೊಳಿ ಸೇರಿದಂತೆ ಇಲಾಖೆಯ ಇನ್ಸಪೆಕ್ಟರಗಳು, ಸಿಬ್ಬಂದಿ ಭಾಗವಹಿಸಿ ನೂತನ ಜಂಟಿ ಆಯುಕ್ತ ರಮೇಶಬಾಬುರನ್ನು ಅದ್ದೂರಿಯಾಗಿ ಸ್ವಾಗತಿಸಿ ; ಆರ್.ಡಿ ಮೇಘಣ್ಣವರ ಅವರನ್ನು ಸತ್ಕರಿಸಿ ಬೀಳ್ಕೊಟ್ಟರು.
ನೂತನವಾಗಿ ಅಧಿಕಾರ ಸ್ವೀಕರಿಸಿರುವ ಜಾರಿ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾಬು ಅವರು ಜಿಎಸ್ ಟಿ ಸಂಗ್ರಹದಲ್ಲಿ ಯಾವ ರೀತಿಯ ರೂಪುರೇಷೆಯೊಂದಿಗೆ ಕಾರ್ಯ ನಿರ್ವಹಿಸುತ್ತಾರೋ ಕಾದು ನೋಡಬೇಕಿದೆ.