ಬೆಂಗಳೂರು :
ದೀಪಾವಳಿ ಪ್ರಯುಕ್ತ ಕೆಲವೇ ಪ್ರತಿಷ್ಠಿತ-ಖ್ಯಾತನಾಮ, ಪ್ರಭಾವಿ ಸಂಪಾದಕರು ಹಾಗೂ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಸಿಹಿ ಹಂಚಲಾಯಿತು. ಕೇವಲ ಸಿಹಿ ಹಂಚಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ . ಇದರ ಜೊತೆಗೆ
ಇದೀಗ 2.5 ಲಕ್ಷ₹ನಗದು ಹಂಚಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ದೀಪಾವಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಸಿಹಿ ಹಾಗೂ ನಗದು ಪಡೆದ ಕೆಲವರು ಒಳಗೊಳಗೇ ಖುಷಿಪಡುತ್ತಿದ್ದಾರೆ. ಹಣವಿರುವುದು ಗೊತ್ತಿಲ್ಲದ ಕೆಲ ಪತ್ರಕರ್ತರು ಹಣ ಇರುವ ವಿಷಯ ತಿಳಿದ ತಕ್ಷಣ ಗಿಫ್ಟ್ ಪಾಕೇಟನ್ನು ಮರಳಿಸಿರುವ ಘಟನೆ ನಡೆದಿದೆ. ಈ ಮೂಲಕ ತಮ್ಮಲ್ಲಿ ಇನ್ನೂ ಪತ್ರಿಕಾ ಮೌಲ್ಯವಿದೆ ಎಂದು ಸಾಬೀತುಪಡಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪತ್ರಕರ್ತರಿಗೆ ಹಣದ ಹೊಳೆ ಹರಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಮುಂದಿನ ವಿಧಾನಸಭಾ
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ರಾಜಾರೋಷವಾಗಿ ನಗದು ವಿತರಿಸಿರುವುದು ಅತ್ಯಂತ ನಾಚಿಕೆಗೇಡು ಎನ್ನುತ್ತಿದ್ದಾರೆ ನಿಶ್ಚಿತ ಪತ್ರಕರ್ತರು.
ಹಣ ವಿತರಣೆಯಾಗಿರುವ ಸುದ್ದಿ ಇದೀಗ ರಾಜಧಾನಿಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ
ಬರುತ್ತಿದ್ದಂತೆಯೇ ಪ್ರತಿಷ್ಠಿತ ಹಾಗೂ ಖ್ಯಾತನಾಮ ಪತ್ರಕರ್ತರಿಗೆ ಅದೆಷ್ಟು ಗಿಫ್ಟ್ ಬರಬಹುದು ಎಂಬ
ವ್ಯಾಖ್ಯಾನಗಳು ಇದೀಗ ಪತ್ರಕರ್ತರ ವಲಯದಿಂದ ಬಂದಿದೆ.