ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಖ್ಯಾತ ನಟ ದರ್ಶನ್ ಮತ್ತು ಗ್ಯಾಂಗ್ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಪ್ರಕ್ರಿಯೆಗಳು ನಡೆದಿವೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದರೂ ಪರಪ್ಪನ ಅಗ್ರಹಾರ ಕೈದಿ ನಂಬರ್ 6106 ಬದಲಾಗುವುದಿಲ್ಲ.
ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಕೊಲೆ ಆರೋಪಿ ದರ್ಶನ್ ಅವರನ್ನು ಬಹುತೇಕ ಗುರುವಾರ ಬೆಂಗಳೂರಿನ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಇನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಆದರೂ E-UTP ನಂಬರ್ ಬದಲಾಗಲ್ಲ. ವಿಚಾರಣಾಧೀನ ಖೈದಿ ಸಂಖ್ಯೆ-6106 ಮುಂದುವರಿಯಲಿದೆ. E-UTP ನಂಬರ್ ಆಗಿ ದರ್ಶನ್ ಖೈದಿ ಸಂಖ್ಯೆ ಆಗಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ E-UTP ನಂಬರ್ ಆಗಿ ಬದಲಾವಣೆ ಮಾಡುವುದಿಲ್ಲ. ಬಳ್ಳಾರಿ ಜೈಲಿನಲ್ಲಿ ದರ್ಶನ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ
ದರ್ಶನ್ ಬಳ್ಳಾರಿ ಜೈಲಿಗೆ, ಪವನ್, ರಾಘವೇಂದ್ರ ಹಾಗೂ ನಂದೀಶ್ರನ್ನು ಮೈಸೂರು, ಜಗದೀಶ್, ಲಕ್ಷ್ಮಣ್ ರನ್ನು ಶಿವಮೊಗ್ಗ, ಧನರಾಜ್ನನ್ನು ಧಾರವಾಡ, ವಿನಯ್ನನ್ನು ವಿಜಯಪುರ, ನಾಗರಾಜ್ನನ್ನು ಕಲಬುರಗಿ, ಪ್ರದೋಶ್ನನ್ನು ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದರ್ಶನ್ ಜೈಲಿಗೆ ಬಂದಾಗಿನಿಂದ ಇರುವ ಪ್ರಕರಣಗಳ ದಾಖಲೆಗಳು, ಜೈಲಿನ ಆಡಳಿತದ ವರದಿ, ಕೋರ್ಟ್ ಆದೇಶ ಪ್ರತಿಗಳು, ವಾರೆಂಟ್ ಪ್ರತಿ ಈಗ ಒಂದು ಕಾರಾಗೃಹದಿಂದ ಮತ್ತೊಂದು ಕಾರಾಗೃಹಕ್ಕೆ ಹಸ್ತಾಂತರವಾಗ ಬೇಕಿದೆ. ಆ ಎಲ್ಲ ಪ್ರಕ್ರಿಯೆಗಳು ಬುಧವಾರ ನಡೆದಿವೆ. ಕೈದಿಯನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಫ್ಯಾಕ್ಸ್ ಹಾಗೂ ಫೋನ್ ಮೂಲಕ ಮಾಹಿತಿ ನೀಡಬೇಕಾಗುತ್ತದೆ. ಜೈಲಿಗೆ ಶಿಫ್ಟ್ ಆಗುವ ಮುನ್ನ ಬಳ್ಳಾರಿಯಲ್ಲಿಯೇ ದರ್ಶನ್ ವೈದ್ಯ ಕೀಯ ಪರೀಕ್ಷೆ ಆಗಬೇಕು. ಅದರ ಬಗ್ಗೆಯೂ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ಜೈಲಾಧಿಕಾರಿಗಳೇ ದರ್ಶನ್ಗೆ ವೈದ್ಯಕೀಯ ಪರೀಕೆ ಮಾಡಿಸಿದಾರೆ. ಒಟ್ಟಾರೆ ಇದೀಗ ದರ್ಶನ್ ಬಳ್ಳಾರಿ ಜೈಲು ಪಾಲಾಗುತ್ತಿರುವುದು ಆ ಪರಿಸರದಲ್ಲಿ ಹೈ ಅಲರ್ಟ್ ಪಡೆದುಕೊಂಡಿದೆ ಮಾತ್ರವಲ್ಲ ಜೈಲಿನ ಪರಿಸರದಲ್ಲಿ ದರ್ಶನ್ ಅಭಿಮಾನಿಗಳು ಬುಧವಾರದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಅವರನ್ನು ಸಹ ನಿಭಾಯಿಸುವುದು ಪೋಲಿಸ್ ಪಾಲಿಗೆ ದೊಡ್ಡ ಸವಾಲಾಗಿದೆ.
ಕೊನೆಗೂ ಪಯಣ…
ಇಂದು ನಸುಕಿನ ಜಾವ ಪೋಲಿಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕರೆದುಕೊಂಡು ಹೊರಟಿದ್ದಾರೆ.
ಟಿಟಿಯ ನೋಂದಣಿ ಸಂಖ್ಯೆ KA.41.G.0050ಯಲ್ಲಿ ಪ್ರಕರಣದ ಎ2 ಆರೋಪಿ ದರ್ಶನ್ ನನ್ನು ಕರೆದೊಯ್ಯಲಾಗುತ್ತಿದೆ. ಈ ವಾಹನಕ್ಕೆ ಎಸಿಪಿ ರಂಗಪ್ಪ ನೇತೃತ್ವದಲ್ಲಿ ಎಸ್ಕಾರ್ಟ್ ನೀಡಲಾಗಿದೆ. ದರ್ಶನ್ ಗ್ಯಾಂಗ್ ಅನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶವನ್ನು ಅಧಿಕೃತವಾಗಿ ಬುಧವಾರ ಬೆಳಗ್ಗೆ ಸ್ವೀಕರಿಸಲಾಯಿತು. ವಿಶೇಷ ಸೌಲಭ್ಯ ಪಡೆದ ಪ್ರಕರಣದ ಕುರಿತು ಪರಪ್ಪನ ಅಗ್ರಹಾರ ಪೊಲೀಸರ ಮಹಜರ್ ಹಾಗೂ ವಿಚಾರಣೆ ಬಾಕಿ ಇತ್ತು. ಹೀಗಾಗಿ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಒಂದು ದಿನ ವಿಳಂಬವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ದರ್ಶನ್ ಗ್ಯಾಂಗ್ ಸ್ಥಳಾಂತರ ಬಗ್ಗೆ ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ಕಲುಬರಗಿ, ಧಾರವಾಡ, ವಿಜಯಪುರ, ಮೈಸೂರು ಸೆಂಟ್ರಲ್ ಜೈಲುಗಳ ಮುಖ್ಯ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದೆ. ಆರೋಪಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಆಯಾ ಜೈಲಿನ ಅಧಿಕಾರಿಗಳು ನೀಡಲಿದ್ದಾರೆ. ಜೈಲಿಗೆ ಕರೆದೊಯ್ಯುವಾಗ ಸೂಕ್ತ ಭದ್ರತೆ ಕಲ್ಪಿಸುವಂತೆ ಸಹ ಬೆಂಗಳೂರು ನಗರ ಪೊಲೀಸರಿಗೆ ಮನವಿ ಮಾಡಲಾಗಿದೆ.
ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರದೂಶ್ ಅವರನ್ನು ಕರೆಯಲಾಗುತ್ತದೆ. ಒಟ್ಟಾರೆ ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚದುರಿ ಹೋಗುತ್ತಿದೆ.