ಬೆಳಗಾವಿ : ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ. ಹೇಮಾವತಿ ವೀ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಧರ್ಮಸ್ಥಳ ಸ್ವಸಹಾಯ ಸಂಘಗಳ ಕಾರ್ಯಕ್ರಮ ಇಡೀ ಸಮಾಜಕ್ಕೆ ಆದರ್ಶ ಎಂದು ವಿಧಾನ ಪರಿಶತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ ಖಾಸಬಾಗದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪ್ರಗತಿಬಂಧು ಸ್ವಹಾಯ ಸಂಘಗಳ ಒಕ್ಕೂಟ ಮಾಸ್ತಮರ್ಡಿ ವಲಯ ಮತ್ತು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಶೆಗಣಮಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ಶೆಗಣಮಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಮಹಾಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಧರ್ಮಸ್ಥಳ ಸಂಘಗಳು ಅತ್ಯಂತ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಿವೆ. ಹಾಗಾಗಿ ಸಮಾಜದಲ್ಲಿ ಒಳ್ಳಯ ಹೆಸರಿದೆ. ಈ ಸಂಘಗಳ ಕಾರ್ಯಚಟುವಟಿಕೆಗೆ ನಾವು ಎಲ್ಲ ರೀತಿಯ ನೆರವು ನೀಡುತ್ತ ಬಂದಿದ್ದೇವೆ ಎಂದು ಚನ್ನರಾಜ ಹೇಳಿದರು.
ಇದೇ ಸಮಯದಲ್ಲಿ ಲಿಂಗೈಕ್ಕ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಗೆ ಗುರುನಮನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನ್ನಪೂರ್ಣ ಬುರಾಣಿ, ಸತೀಶ್ ನಾಯ್ಕ್, ಬಸವರಾಜ ಸೊಪ್ಪಿಮಠ್, ಮಹಾದೇವಪ್ಪ ಸೋಮನಟ್ಟಿ, ಅಮೃತ್ ಕುಡಚಿ, ಬಿ.ಎಮ್ ಪಾಟೀಲ, ನಾಮದೇವ ಜೋಗಣ್ಣವರ, ಪೂಜಾ ಸಮಿತಿಯ ಪದಾಧಿಕಾರಿಗಳು ಹಾಗೂ ಗೌರವ ಸಲಹೆಗಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.