ಬೆಳಗಾವಿ : ಕಾಗವಾಡದಿಂದ ಚಿತ್ರದುರ್ಗದ ಕಡೆಗೆ ಹೊರಟಿದ್ದ ಕಾರಿನಲ್ಲಿದ್ದ 3 ಕೆಜಿ 75 ಗ್ರಾಂ ಗಾಂಜಾ, ಕಾರನ್ನು ಇಲ್ಲಿನ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಟ್ಟಣದ ಚನ್ನಮ್ಮ ವೃತ್ತದ ಸಮೀಪ ಸೋಮವಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಚಿತ್ರದುರ್ಗ ನಗರದ ನಿವಾಸಿಗಳಾದ ಫೈರೋಜ್ ನುಸರತ್, ಮಹ್ಮದಕಲಂದರ ಇಮ್ಮಿಯಾಜ್ಶರೀಫ್, ತಂಜೀಂ ನೌಶಾದ ಆರೋಪಿಗಳು.
ಪಿಎಸ್ಐ ಎಂ.ಬಿ. ಬಿರಾದಾರ, ಪಿಎಸ್ಐ (ಅಪರಾಧ) ಆರ್.ಎಚ್. ಬಗಲಿ ನೇತೃತ್ವದಲ್ಲಿ ಕಾಗವಾಡ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ಯಲ್ಲಾಲಿಂಗ ಲಾಳಿ, ಸುರೇಶ ನಂದಿವಾಲೆ, ಬೀರಪ್ಪಾ ವ್ಯಾಪಾರಿ, ಅಶೋಕ ಬಾಳಿಗೇರಿ, ಅಣ್ಣಪ್ಪಾ ಹಡಪದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಹಸೀಲ್ದಾರರ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜೀವಕುಮಾರ ಸದಲಗೆ, ಗ್ರಾಮ ಲೆಕ್ಕಾಧಿಕಾರಿ ಪ್ರಭುಕುಮಾರ ಹೊನರಡ್ಡಿ ಉಪಸ್ಥಿತರಿದ್ದರು.