ಬೆಳಗಾವಿ: ಬಿ.ಕೆ. ಕಂಗ್ರಾಳಿಯಲ್ಲಿ ಶನಿವಾರ ರಾತ್ರಿ ಬೈಕ್ ಮಾರ್ಕಂಡೇಯ ನದಿಗೆ ಬಿದ್ದು, ಒಬ್ಬ ಸವಾರ ನೀರುಪಾಲಾಗಿದ್ದ. ಕೊನೆಗೂ ಎನ್ ಡಿಆರ್ ಎಫ್ ಆ ಯುವಕನ ಶವ ಪತ್ತೆ ಮಾಡಿದೆ. ಬೈಕ್ ನಲ್ಲಿದ್ದ ಇನ್ನೊಬ್ಬ ಶನಿವಾರ ರಾತ್ರಿಯೇ ಈಜಿ ದಡ ಸೇರಿದ್ದ.
ಅಲತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಅವನ ಶವ ಪತ್ತೆಯಾಗಿದೆ. ಇವರ ಸಹೋದರ ಜ್ಯೋತಿನಾಥ ಪಾಟೀಲ ಈಜಿ ದಡ ಸೇರಿದ್ದರು.
ಇಬ್ಬರೂ ಸಹೋದರರು ಅಲತಗಾದಿಂದ ಕಂಗ್ರಾಳಿಗೆ ಕ್ಷೌರ ಮಾಡಿಸಿಕೊಳ್ಳಲು ಹೊರಟಿದ್ದರು. ನದಿ ಹರಿಯುವ ಜಾಗದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದಿದೆ. ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕಾಗಮಿಸಿದ ಕಾಕತಿ ಠಾಣೆ ಪೊಲೀಸರು ಓಂಕಾರ ಪಾಟೀಲಗಾಗಿ ಶೋಧ ಕಾರ್ಯ ಶುರು ಮಾಡಿದರು. ಡಿಸಿಪಿ ಪಿ.ವಿ.ಸ್ನೇಹಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎನ್.ಡಿ.ಆರ್.ಎಫ್ ತಂಡ ಕರೆಸಲಾಗಿದ್ದು ಶೋಧ ಕಾರ್ಯ ರಾತ್ರಿಯೂ ನಡೆದಿತ್ತು. ಆದರೆ, ರವಿವಾರ ಯುವಕನ ಶವ ಪತ್ತೆಯಾಗಿದೆ.