ರಸ್ತೆಗುಂಡಿಯಲ್ಲಿ ಬೈಕ್ ಜಿಗಿದು ನೀರಿನ ಕಾಲುವೆಗೆ ಬಿದ್ದ ಯುವಕರು; ಒರ್ವ ನಾಪತ್ತೆ..!
ನಾಪತ್ತೆ ಯುವಕನ ಪತ್ತೆಗಾಗಿ ಸ್ಥಳದಲ್ಲೇ ಠಿಕಾಣಿ ಹೂಡಿದ DCP, ACP, PSI ಹಾಗೂ AC.
PWDಯವರ ಅಪಘಾತಕಾರಿ ಗುಂಡಿಮುಚ್ಚಿದ ಪೊಲೀಸರು..!
ಬೆಳಗಾವಿ : ತಾಲೂಕಿನ ಅಲತಗಾ ಗ್ರಾಮದ ಗೆಳೆಯರಿಬ್ಬರು ಬೈಕ್ ಮೇಲೆ ಪಕ್ಕದ ಕಂಗ್ರಾಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಬೈಕ್ ಹೊಯ್ದು ಸವಾರನ ನಿಯಂತ್ರಣ ನದಿಯ ಪಕ್ಕದಲ್ಲಿ ಹರಿಯುವ ಕಾಲುವೆಯಲ್ಲಿ ಬಿದ್ದ ಪರಿಣಾಮ ಒರ್ವ ಯುವಕ ಬೈಕ್ ಸಮೇತ ಹರಿದುಕೊಂಡು ಹೋಗಿ ನಾಪತ್ತೆಯಾಗಿದ್ದು, ಇನ್ನೊರ್ವ ಬದುಕುಳಿದಿರುವ ಘಟನೆ ನಿನ್ನೆ (ಶನಿವಾರ) ರಾತ್ರಿ ನಡೆದಿದೆ.
ಅಲತಗಾ ಗ್ರಾಮದ ಓಂಕಾರ ಪಾಟೀಲ ನಾಪತ್ತೆಯಾದ ಯುವಕ. ಜ್ಯೋತಿನಾಥ ಪಾಟೀಲ ಬದುಕುಳಿದು ಬಂದವ.
ನಿನ್ನೆ ಸಾಯಂಕಾಲ ಓಂಕಾರ ಹಾಗೂ ಜ್ಯೊತಿನಾಥ ಬೈಕ್ ಮೇಲೆ ಅಲತಗಾ ಗ್ರಾಮದಿಂದ ಕಂಗ್ರಾಳಿ ಕಡೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಬೈಕ್ ಹಾಕಿದ ಕಾರಣ ಸವಾರನ ಆಯತಪ್ಪಿ ಮಂದೆ ಹರಿಯುವ ಕಾಲುವೆಯಲ್ಲಿ ಬಿದ್ದಿದ್ದಾರೆ. ಆ ರಬಸದಲ್ಲಿ ಓಂಕಾರ ಪಾಟೀಲ ಎಂಬ ಯುವಕ ಬೈಕನೊಂದಿಗೆ ನಾಪತ್ತೆಯಾಗಿದ್ದು ಜ್ಯೋತಿನಾಥ ಪಾಟೀಲ ಎಂಬಾತ ಬಚಾಚ ಆಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಕಾಕತಿ ಪೊಲೀಸರು ಸ್ಥಳಕ್ಕೆ ಬದಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಡಿಸಿಪಿ ಸ್ನೇಹಾ ಪಿ ವಿ ಖುದ್ದಾಗಿ ಬಂದು ಪರಿಶೀಲನೆ ನಡೆಸಿ, ಶೋಧ ಕಾರ್ಯಾಚರಣೆಗಾಗಿ SDRF ತಂಡ ಕರೆಸಿ ಸಂಪೂರ್ಣ ತಯಾರಿ ಮಾಡಿ ಶೋಧ ನಡೆಸಿದಾಗ ಬೈಕ್ ಪತ್ತೆಯಾಗಿದೆ. ಆದರೆ ತಡರಾತ್ರಿ ಹಾಗೂ ನದಿಯ ದಂಡೆಯ ಸುತ್ತಲೂ ಗಿಡಘಂಟಿಗಳು ಬೆಳೆದಿರುವ ಕಾರಣ ಶೋಧ ಕಾರ್ಯ ನಿಲ್ಲಿಸಲಾಗಿದೆ. ಬೆಳಗಿನ ಜಾವ ಮತ್ತೆ ಶೋಧ ನಡೆಯಲಿದೆ ಎಂದು ಡಿಸಿಪಿ ಸ್ನೆಹಾ ತಿಳಿಸಿದರು.
ಈ ಸಂದರ್ಭದಲ್ಲಿ ಎಸಿಪಿ ಗಂಗಾಧರ, ಪಿಎಸ್ಐ ಅವಿನಾಶ ಯರಗೊಪ್ಪ, ಮಂಜುನಾಥ ಹುಲಕುಂದ ಸಿಬ್ಬಂದಿ ಬಲ್ಲಾಳ, ಯರಗುದ್ರಿ ಹಾಗೂ ಎಸಿ ಶ್ರವಣ ನಾಯಿಕ, ಕಾಕತಿ ಉಪ ತಹಶಿಲ್ದಾರ ಸಾಳೂಂಕೆ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ ಸೇರಿದಂತೆ ಅನೇಕರು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾದರು.