ಬೆಳಗಾವಿ : ಮಹಿಳೆಯೊಬ್ಬರು ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಆಗ ಮಹಿಳಾ ಪಿಎಸ್ಐ ಜಾಡಿಸಿ ಒದ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ನಿಪ್ಪಾಣಿ ತಾಲೂಕಿನ ಖಡಕಲಾಟ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗಿದೆ.
ಮಹಿಳಾ ಪಿಎಸ್ಐ ಅನಿತಾ ರಾಠೋಡ ಎಂಬುವವರು ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದಿದ್ದು, ಮಹಿಳೆಯ ಮೇಲೆ ಹಲ್ಲೆಗೆ ಕುಟುಂಬಸ್ಥರು ಕಿಡಿಕಾರಿದ್ದಾರೆ.
ಪೂನಂ ಮಾಯಣ್ಣವರ ಎಂಬವರು ಅಣ್ಣ-ತಮ್ಮಂದಿರ ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಖಡಕಲಾಟ ಪಿಎಸ್ಐ ಅನಿತಾ ರಾಠೋಡ ಪೂನಂ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ಅಸ್ವಸ್ಥಳಾಗಿದ್ದ ಪೂನಂ ಮಾಯಣ್ಣಳನ್ನು ಕುಟುಂಬಸ್ಥರು ಕೂಡಲೇ ನಿಪ್ಪಾಣಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಪೂನಂ ನರಳಾಡುತ್ತಿದ್ದು, ಪಿಎಸ್ಐ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಠಾಣೆಗೆ ಬಂದ ಮಹಿಳೆಗೆ ಪಿಎಸ್ಐ ಅನಿತಾ ಹಲ್ಲೆ ಮಾಡಿದ್ದು ಯಾಕೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.