ಬೆಳಗಾವಿ : ರಾಯಬಾಗ ತಾಲೂಕು ಹೊಸದಿಗ್ಗೇವಾಡಿ ಗ್ರಾಮದ ಬಸವರಾಜ ಭೀಮಪ್ಪ ಸಗರೆ(45)ಎಂಬ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಒಂದು ಎಕರೆ 10ಗುಂಟೆ ಜಮೀನು ಇದೆ. ಸಾಗುವಳಿ ಮಾಡುವ ಉದ್ದೇಶದಿಂದ ಅವರು ಹಲವು ಸಹಕಾರಿ ಸಂಘಗಳಲ್ಲಿ ಲಕ್ಷಾಂತರ ರೂ.ಸಾಲ ಪಡೆದುಕೊಂಡಿದ್ದರು. ಸಕಾಲಕ್ಕೆ ಮಳೆಯಾಗದೆ ಕೈಕೊಟ್ಟಿದ್ದರಿಂದ ಬೆಳೆಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ ಎಂದು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.