ಬೆಳಗಾವಿ: ಜಿಲ್ಲೆಯ ಹುನ್ನರಗಿಯ ನದಿಯಲ್ಲಿ ಮೊಸಳೆ ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನಾಗರಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ರವಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ ಗುಳೇದ ಅವರು, ಬೆಳಗಾವಿ ಜಿಲ್ಲೆಯ ಹುನ್ನರಗಿಯ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಇದರಿಂದ ಆತಂಕ ಸೃಷ್ಟಿಯಾಗಿದ್ದು ನಾಗರಿಕರು ಯಾವುದೇ ಕಾರಣಕ್ಕೆ ನದಿಗೆ ಇಳಿಯಬಾರದು ಎಂದು ತಿಳಿಸಿದರು. ಜೊತೆಗೆ ಕೃಷ್ಣಾ ನದಿ, ವೇದಗಂಗಾ, ದೂದಗಂಗ ಘಟಪ್ರಭಾ ಸೇರಿದಂತೆ ಇತರ ನದಿಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನಾಗರಿಕರು ನದಿಗೆ ಇಳಿಯದಂತೆ ಸೂಚನೆ ನೀಡಿದರು. ಭಾರಿ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಯಾರೂ ನದಿಗೆ ಇಳಿಯುವ ಸಾಹಸ ಮಾಡದಂತೆ ಅವರು ತಿಳಿಸಿದರು.