ಮುಂಬೈ : ಕ್ರಿಕೆಟ್ ತಾರೆ ಕೆ.ಎಲ್. ರಾಹುಲ್ ದಂಪತಿ ಮಂಗಳೂರಿನ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಾಗೂ ಇನ್ನೊಂದು ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಮುಂಬೈಗೆ ತೆರಳಿದ ಅವರು ಜುಲೈ 15 ರಂದು ಹೊಸ ಮನೆಯನ್ನು ನೋಂದಣಿ ಮಾಡಿಕೊಂಡಿದ್ದರು.
ಅತಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಮುಂಬೈಯ ಪ್ರತಿಷ್ಠಿತ ಬಾಂದ್ರಾದಲ್ಲಿ
20 ಕೋಟಿ ರೂಪಾಯಿ ಮೌಲ್ಯದ 3,350 ಚದರ ಅಡಿ ಅಳತೆಯ ಮನೆ ಖರೀದಿ ಮಾಡಿ ಹೊಸ ಮನೆ ಪ್ರವೇಶದ ತವಕದಲ್ಲಿದ್ದಾರೆ. 18 ಮಹಡಿಗಳ ಸಂಧು ಬಿಲ್ಡಿಂಗ್ ಪ್ಯಾಲೇಸ್ ನಲ್ಲಿ ಈ ಮನೆ ಇದೆ. ಮುದ್ರಾಂಕ ಶುಲ್ಕ 1.20 ಕೋಟಿ ರೂಪಾಯಿ ಹಾಗೂ ನೋಂದಣಿ ಶುಲ್ಕ ₹ 30,000 ನ್ನು ಕಟ್ಟಿದ್ದು ಇನ್ನೂ ಕೆಲವೇ ದಿನಗಳಲ್ಲಿ ಈ ತಾರಾ ದಂಪತಿ ಹೊಸ ಮನೆಗೆ ಗೃಹಪ್ರವೇಶ ಮಾಡಲಿದ್ದಾರೆ.