ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಭಾನುವಾರ ಏಕಾಏಕಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಭಾರತ ಮೂಲದ ಕಮಲ ಹ್ಯಾರಿಸ್ ಅವರಿಗೆ ಈಗ 60 ವರ್ಷ.
ಕಳೆದ ವಾರವಷ್ಟೇ ಬೈಡನ್ ಕೋವಿಡ್ ಗೆ ತುತ್ತಾಗಿದ್ದರು. ಇದೀಗ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದಿದ್ದು, ಕೂತುಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ವಿವರವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಲಿರುವುದಾಗಿ ಅವರು ತಿಳಿಸಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಆಡಳಿತರೂಢ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರ ಹೆಸರು ಘೋಷಿಸಿರುವುದನ್ನು ಭಾರತ ಮೂಲದ ಅಮೆರಿಕನ್ ಶಾಸಕಿ ಪ್ರಮೀಳಾ ಜೈಪಾಲ್ ಸಂತಸ ವ್ಯಕ್ತಪಡಿಸಿದ್ದಾರೆ. ನಾಲ್ಕು ಅವಧಿಗೆ ಪ್ರಮೀಳಾ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಗೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕ ಮಹಿಳೆ. ಡೆಮಾಕ್ರಟಿಕ್ ಪಕ್ಷದ ಪ್ರಬಲ ಶಾಸಕಿ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಮೀಳಾ ಅವರು ಕಮಲಾ ಅಧ್ಯಕ್ಷರಾಗಲು ಸಂಪೂರ್ಣ ಬೆಂಬಲವಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಹೊಸ ಇತಿಹಾಸ ನಿರ್ಮಿಸೋಣ. ಕಮಲಾ ಹ್ಯಾರಿಸ್ ಗೆದ್ದೇ ಗೆಲ್ಲುತ್ತಾರೆ. ನವೆಂಬರ್ 5 ರಂದು ನಡೆಯುವ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಮಲ ಹ್ಯಾರೀಸ್ ಅವರ ತಾತ ಗೋಪಾಲನ್ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾಗಿದ್ದವರು. ಈ ಹಿಂದೆ ತಾತನ ಬಗ್ಗೆ ಮಾತನಾಡಿದ್ದ ಕಮಲ ಅವರು ನನ್ನ ರಾಜಕೀಯ ಗುರು ತಾತನವರು ಎಂದಿದ್ದರು. ನನ್ನಲ್ಲಿ ವಿಶ್ವಕಲ್ಯಾಣದ ಬದ್ಧತೆ ಮೂಡಿಸಿದವರು ತಾತ ಗೋಪಾಲನ್. ಅವರೇ ನನ್ನ ಮೊದಲ ರಾಜಕೀಯ ಗುರು ಎಂದು ಪ್ರತಿಕ್ರಿಯೆ ನೀಡಿದ್ದರು. ಚೆನ್ನೈ ಕಡಲ ತೀರದಲ್ಲಿ ನನ್ನ ತಾತ ನನ್ನನ್ನು ಬೆಳಗಿನ ವಾಕಿಂಗಿಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರಜಾಪ್ರಭುತ್ವದ ಮಹತ್ವ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಗುಣಗಳನ್ನು ಅವರು ನನ್ನಲ್ಲಿ ಬೆಳೆಸಿದ್ದರು ಎಂದು ಕಮಲ ಹೇಳಿದ್ದರು.
ಕಮಲ ಅಮೇರಿಕಾದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. 2021 ರಲ್ಲಿ ಜೋ ಬೈಡನ್ ಅವರ ಅನಾರೋಗ್ಯದ ಕಾರಣ ಕಮಲ ಅವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರವನ್ನು 85 ನಿಮಿಷಗಳ ಕಾಲ ನೀಡಲಾಗಿತ್ತು.
ಕಮಲ ಹ್ಯಾರಿಸ್ ಅವರ ತಾಯಿ ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದವರು. ನಂತರ ಅಮೆರಿಕಕ್ಕೆ ತೆರಳಿ ಅಲ್ಲಿನವರನ್ನೇ ಮದುವೆಯಾಗಿ ಆ ದೇಶದಲ್ಲೆ ನೆಲೆಸಿದ್ದಾರೆ. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಿದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲ ಪಾತ್ರರಾಗಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದಾಗ ಚೆನ್ನೈಯಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಹಾಗೂ ಸಿಹಿ ವಿತರಿಸಲಾಗಿತ್ತು. ಕಮಲ ಅವರ ತಂದೆ ಜಮೈಕಾ ಮೂಲದವರಾದರೆ ತಾಯಿ ಭಾರತೀಯರು. ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಮಲ ಗಮನಾರ್ಹ ಸುಧಾರಣೆ ತಂದು ಗಮನ ಸೆಳೆದವರು.
ಕಮಲಾ ಹ್ಯಾರಿಸ್ ಪರಿಚಯ :
ಕಮಲಾ ದೇವಿ ಹ್ಯಾರಿಸ್(ಜನನ ಅಕ್ಟೋಬರ್ 20, 1964) ಒಬ್ಬ ಅಮೇರಿಕನ್ ರಾಜಕಾರಣಿ ಮತ್ತು ವಕೀಲರಾಗಿದ್ದು, ಅವರು ಅಧ್ಯಕ್ಷ ಜೋ ಬಿಡೆನ್ ಅವರ ಅಧಿಕಾರದ ಅವಧಿಯಲ್ಲಿ 2021 ರಿಂದ ಯುನೈಟೆಡ್ ಸ್ಟೇಟ್ಸ್ನ 49 ನೇ ಮತ್ತು ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ. ಅವರು ಮೊದಲ ಮಹಿಳಾ ಉಪಾಧ್ಯಕ್ಷೆ ಮತ್ತು U.S. ಇತಿಹಾಸದಲ್ಲಿ ಅತ್ಯುನ್ನತ ಶ್ರೇಣಿಯ ಮಹಿಳಾ ಅಧಿಕಾರಿ, ಜೊತೆಗೆ ಮೊದಲ ಆಫ್ರಿಕನ್-ಅಮೆರಿಕನ್ ಮತ್ತು ಮೊದಲ ಏಷ್ಯನ್-ಅಮೆರಿಕನ್ ಉಪಾಧ್ಯಕ್ಷರಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸದಸ್ಯೆ, ಅವರು ಈ ಹಿಂದೆ 2017 ರಿಂದ 2021 ರವರೆಗೆ ಕ್ಯಾಲಿಫೋರ್ನಿಯಾದಿಂದ ಯುಎಸ್ ಸೆನೆಟರ್ ಆಗಿದ್ದರು ಮತ್ತು 2011 ರಿಂದ 2017 ರವರೆಗೆ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು.
ಕಮಲಾ ಹ್ಯಾರಿಸ್ 2021
ಯುನೈಟೆಡ್ ಸ್ಟೇಟ್ಸ್ನ 49 ನೇ ಉಪಾಧ್ಯಕ್ಷ ಸ್ಥಾನ ಅಧಿಕಾರ ವಹಿಸಿಕೊಂಡರು.
ವೈಯಕ್ತಿಕ ವಿವರಗಳು :
ಹುಟ್ಟು-ಕಮಲಾ ದೇವಿ ಹ್ಯಾರಿಸ್ ಅಕ್ಟೋಬರ್ 20, 1964 (ವಯಸ್ಸು 60)
ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಾ, ಯು.ಎಸ್., ರಾಜಕೀಯ ಪಕ್ಷ
ಪ್ರಜಾಸತ್ತಾತ್ಮಕ. ಸಂಗಾತಿ
ಡೌಗ್ ಎಂಹಾಫ್ (ಮ. 2014)
ಪೋಷಕರು ಡೊನಾಲ್ಡ್ J. ಹ್ಯಾರಿಸ್-ಶ್ಯಾಮಲಾ ಗೋಪಾಲನ್
ಸಂಬಂಧಿಕರು
ಕಮಲಾ ಹ್ಯಾರಿಸ್ ಕುಟುಂಬ
ನಿವಾಸ ನಂಬರ್ ಒನ್ ಅಬ್ಸರ್ವೇಟರಿ ಸರ್ಕಲ್.
ಶಿಕ್ಷಣ ಹೊವಾರ್ಡ್ ವಿಶ್ವವಿದ್ಯಾಲಯ (ಬಿಎ)
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಹೇಸ್ಟಿಂಗ್ಸ್ (ಜೆಡಿ) ಉದ್ಯೋಗ- ರಾಜಕಾರಣಿ, ವಕೀಲಿ ವೃತ್ತಿ.