ಬೆಳಗಾವಿ: ಬೆಳಗಾವಿಯ ತಿನಿಸು ಕಟ್ಟೆ ವಿವಾದಕ್ಕೆ ಸಂಬಂಧಿಸಿ ಇದೀಗ ಬೆಳಗಾವಿ ಪ್ರಾದೇಶಿಕ ಆಯುಕ್ತರು ನಗರ ಸೇವಕರಿಬ್ಬರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜುಲೈ 22ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಹಾಜರಾಗದೆ ಇದ್ದರೆ ಏಕ ಪಕ್ಷಿಯ ನಿರ್ಣಯ ಎಂದು ತಿಳಿಸಿದ್ದಾರೆ. ವಾರ್ಡ್ ನಂಬರ್ 23 ನಗರಸೇವಕ ಜಯಂತ ಜಾಧವ ಮತ್ತು ವಾರ್ಡ್ ನಂಬರ್ 43 ರ ನಗರಸೇವಕ ಮಂಗೇಶ್ ಪವಾರ್ ವಿರುದ್ಧ ನೋಟಿಸ್ ಜಾರಿಯಾಗಿದೆ.
ಜಿಲ್ಲಾಧಿಕಾರಿಗಳು ದಿ. 8.1.2024 ಮತ್ತು ಪಾಲಿಕೆ ಆಯುಕ್ತರ ದಿ, 6.1.2024ರ ಪ್ರಸ್ತಾವನೆಯನ್ವಯ ಕೆಎಂಸಿ ಕಾಯ್ದೆ 1976 ಸೆಕ್ಷನ್ 26)(1) ಸಿ ಹಾಗೂ ಕೆಎಂಸಿ ಕಾಯ್ದೆ 1976 26(1) ರಡಿ ನಿಮ್ಮ ವಿರುದ್ಧ ದೂರು ಸಲ್ಲಿಸಿದ್ದರ ಮೇರೆಗೆ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ಈ ನೋಟೀಸನ್ನು ಪ್ರಾದೇಶಿಕ ಆಯುಕ್ತರು ಕಳೆದ ದಿ.15 ರಂದು ನೀಡಿದ್ದಾರೆ.
ಬೆಳಗಾವಿ ತಿನಿಸು ಕಟ್ಟೆ ಟೆಂಡರ್ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂಬ ಆರೋಪ ಈ ಹಿಂದೆ ವ್ಯಕ್ತವಾಗಿತ್ತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸ ಮರಕ್ಕೆ ನಾಂದಿ ಹಾಡಿತ್ತು.