ಬೆಂಗಳೂರು : ನಾವೆಲ್ಲ ಮೂಲ ಬೆಂಗಳೂರು ಜಿಲ್ಲೆಯವರು. ನಮ್ಮ ಊರಿನ ಹೆಸರು, ಗುರುತನ್ನು ಕಳೆದುಕೊಳ್ಳಬಾರದು. ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು ಹೆಸರು ಬದಲಾವಣೆ ಮಾಡಿಯೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುವ ವಿಚಾರ ಉಲ್ಲೇಖಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರನ್ನು ಹೊಳೆನರಸೀಪುರ ಅಥವಾ ಹಾಸನದ ದೇವೇಗೌಡರು ಎನ್ನುತ್ತಾರೆ. ಅದೇ ರೀತಿ ನಾವು ನಮ್ಮ ಗುರುತನ್ನು ಕಳೆದುಕೊಳ್ಳಬಾರದು. ನಾನು ನಮ್ಮ ಜಿಲ್ಲೆಯ ಗೌರವ ಕಾಪಾಡಲು ಯತ್ನಿಸುತ್ತಿದ್ದೇನೆ ಎಂದು ಹೇಳಿದರು.