ಬೆಳಗಾವಿ: ಪಂಢರಾಪುರಕ್ಕೆ ಆಷಾಢ ಏಕಾದಶಿ ಪ್ರಯುಕ್ತ ಶ್ರೀ ವಿಠಲ ದೇವರ ದರ್ಶನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಬೋರಗಾಂವ ನಿವಾಸಿ ಲಹು ರಾಮ ಬೇವಿನಕಟ್ಟಿ (62) ಜುಲೈ 8ರಂದು ಬೋರಗಾಂವದಿಂದ ಪಾದಯಾತ್ರೆ ಹೊರಟ್ಟಿದ್ದರು.17 ರಂದು ವಿಠಲ-ರುಕ್ಮಿಣಿ ದರ್ಶನ ಪಡೆದುಕೊಂಡು 18ರಂದು ಬೋರಗಾಂವಗೆ ಹೊರಡಲು ತಯಾರಾಗುತ್ತಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಆಷಾಢ ಏಕಾದಶಿಗೆ ಪಂಢರಪುರಕ್ಕೆ ತೆರಳಿದ್ದ ವಡಗಾವಿ ಸೋನಾರಗಲ್ಲಿಯ ಪ್ರವೀಣ್ ಸುತಾರ್ ಎಂಬುವವರು ಸಹಾ ಹೃದಯದ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು.