- ಮುಂಬೈ : ಮಹಾರಾಷ್ಟ್ರದ ಜಲ್ನಾದಲ್ಲಿ ಗುರುವಾರ ವೇಗವಾಗಿ ಬಂದ ಜೀಪ್ ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದ ಪರಿಣಾಮ ಕನಿಷ್ಠ 7 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಜೀಪು ಯಾತ್ರೆ ಮುಗಿಸಿ ಪಂಢರಪುರದಿಂದ ರಾಜೂರಿಗೆ ಹಿಂತಿರುಗುತ್ತಿದ್ದ ವೇಳೆ ಚಾಲಕ ಮೋಟಾರ್ ಸೈಕಲ್ ತಪ್ಪಿಸಲು ಯತ್ನಿಸಿದರಾದರೂ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಬಾವಿಗೆ ಬಿದ್ದಿದೆ.