ಬೆಳಗಾವಿ : ಬೆಳಗಾವಿ ಪೊಲೀಸರು ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.
ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮೋಟಾರು ಸೈಕಲ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾ ಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ಬೆಳಗಾವಿ ನಗರ, ಮತ್ತು ಗಂಗಾಧರ ಬಿ ಎಮ್ ಸಹಾಯಕ ಪೊಲೀಸ್ ಆಯುಕ್ತರು ಬೆಳಗಾವಿ ಗ್ರಾಮೀಣ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ:12/07/2024 ರಂದು ಆರೋಪಿತನಾದ ಆಜಾದ್ ಮೆಹಬೂಬಸುಭಾನಿ ಕೀಲ್ಲೆದಾರ ಸಾ : ತಿಗಡಿ ತಾ : ಬೈಲಹೊಂಗಲ ಇವನಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 62/2024 ಕಲಂ 379 IPC ನೇದ್ದರಲ್ಲಿ ದಸ್ತಗಿರಿ ಮಾಡಿ ಈತನಿಂದ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಒಂದು ಮೋಟಾರ್ ಸೈಕಲ್ ಮತ್ತು ಬೇರೆ ಬೇರೆ ಠಾಣಾ ಹದ್ದಿಯ 4 ಮೋಟಾರ್ ಸೈಕಲ್ ಗಳನ್ನು ಹೀಗೆ ಒಟ್ಟು 150000/-ರೂ ಕಿಮ್ಮತ್ತಿನ 5 ಹೀರೊ ಕಂಪನಿಯ ಮೋಟಾರ್ ಸೈಕಲ್ ಗಳನ್ನು ಜಫ್ತು ಮಾಡಿ ವಶಕ್ಕೆ ಪಡೆದುಕೊಂಡಿದೆ.
ತನಿಖಾ ತಂಡದಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ ಬಿ ನೀಲಗಾರ ಪಿ.ಎಸ್.ಐ ಎಸ್ ಆರ್ ಮುತ್ತತ್ತಿ ಮತ್ತು ಅವಿನಾಶ್ ಎ ವೈ , ಸಿ ಎಚ್ ಸಿ ಗಳಾದ ಅರುಣ ಕಾಂಬಳೆ , ಸಿಪಿಸಿಗಳಾದ ಎಸ್ ಬಿ ಬಾಬಣ್ಣವರ, ಪ್ರಭಾಕರ ಭೂಸಿ, ರಾಜು ಕೆಳಗಿನಮನಿ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.