ಬೆಳಗಾವಿ: ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಮತ್ತು ಖಾನಾಪುರದ ಪೊಲೀಸ್ ತರಬೇತಿ ಶಾಲೆಗಳ ವತಿಯಿಂದ ಹೊಸ ಅಪರಾಧಿಕ ಕಾನೂನುಗಳು: ಮುಂದಿನ ಸವಾಲುಗಳು ವಿಷಯವಾಗಿ ಒಂದು ದಿನದ ಕಾರ್ಯಾಗಾರವನ್ನು ಜೂ.20 ರಂದು ಬೆಳಗ್ಗೆ 9 ಕ್ಕೆ ನಗರದ ಕೆಎಲ್ ಇ ಸಂಸ್ಥೆಯ ಆರ್.ಎಲ್. ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎ.ಎಸ್. ಪಾಶ್ಚಾಪುರೆ ಮುಖ್ಯ ಅತಿಥಿಯಾಗಿ ಆಗಮಿಸುವರು. ಬೆಳಗಾವಿಯ ನಿವೃತ್ತ ಪೊಲೀಸ್ ನಿರೀಕ್ಷಕ ಎಸ್ .ಬಿ.ಮದಿಹಳ್ಳಿ ಉಪಸ್ಥಿತರಿರುವರು. ಕೆಎಲ್ ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಅಧ್ಯಕ್ಷತೆ ವಹಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ
ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಜ್ಯೋತಿ ಹಿರೇಮಠ, ಧಾರವಾಡದ ನಿವೃತ್ತ ಡಿಎಸ್ ಪಿ ಜಿ.ಜಿ.
ಮರಿಬಶೆಟ್ಟಿ, ಹಾಸನ ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಕಾನೂನು ಪ್ರಾಧ್ಯಾಪಕ ಡಾ.ಎಂ.ಕೆ.ಮಾಟೊಳ್ಳಿ, ಹುಬ್ಬಳ್ಳಿಯ ನಿವೃತ್ತ ಸಾರ್ವಜನಿಕ ಅಭಿಯೋಜಕ ಎ.ಎಂ.ಹೊಸಮನಿ ಅವರು ವಿವಿಧಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾರ್ಯಾಗಾರದ ಸಂಯೋಜಕರಾದ ಡಾ. ಸುಪ್ರಿಯಾ ಸ್ವಾಮಿ ಹಾಗೂ ಡಾ.ಅಶ್ವಿನಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.