ದೆಹಲಿ : ಹರಿಯಾಣದ ಕುಶಾಲ್ ಕುಮಾರ್ ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ.
2024ರ ಜೂನ್ 18ರಿಂದಲೇ ಅಂದರೆ, ಮುಂದಿನ 48 ಗಂಟೆಗಳಲ್ಲಿಯೇ ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗಲಿದೆ. ತಮ್ಮನ್ನು ತಾವು ವೈದಿಕ ಜ್ಯೋತಿಷಿ ಎಂದು ಘೋಷಿಸಿಕೊಂಡಿರುವ ಕುಶಾಲ್ ಕುಮಾರ್ ಇದುವರೆಗೆ ನುಡಿದ ಭವಿಷ್ಯಗಳು ನಿಜವಾಗಿವೆ. ಜೂನ್ 18ರಂದೇ ಜಾಗತಿಕವಾಗಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷಿ ಕುಶಾಲ್ ಕುಮಾರ್,
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್ ಕುಮಾರ್ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಕೊರಿಯಾ ಸೈನಿಕರು ದಕ್ಷಿಣ ಕೊರಿಯಾ ಗಡಿಗಳತ್ತ ನುಗ್ಗುತ್ತಿದ್ದಾರೆ. ಇಸ್ರೇಲ್ ಹಾಗೂ ಗಾಜಾ ನಡುವಿನ ಸಮರವು ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಉಕ್ರೇನ್ನಲ್ಲಿ ರಷ್ಯಾವಂತೂ ಮಾರಣಹೋಮ ನಡೆಸುತ್ತಿದೆ. ಇನ್ನು ಕಳೆದ ಜೂನ್ನಲ್ಲಿಯೇ ಜಮ್ಮು-ಕಾಶ್ಮೀರದಲ್ಲಿ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದೆಲ್ಲ ಕಾರಣದಿಂದಾಗಿ ಜಾಗತಿಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ, ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇದರಿಂದ ಜಾಗತಿಕ ಅಶಾಂತಿ ಸೃಷ್ಟಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ.