ಬೆಳಗಾವಿ : ನೊಂದಣಿ ಸಂಖ್ಯೆಗಳಿಲ್ಲದ ವಾಹನಗಳನ್ನು ಅಪರಾಧಿಕ ಕೃತ್ಯಗಳಲ್ಲಿ ಬಳಸಲಾಗುತ್ತಿರುವುದು ಈ ಹಿಂದಿನ ಪ್ರಕರಣಗಳ ತನಿಖೆಗಳಿಂದ ಕಂಡು ಬಂದಿರುತ್ತದೆ.
ಇದರಲ್ಲಿ ಮುಗ್ದ ಸಾರ್ವಜನಿಕರು ಬಲಿಪಶುವಾಗುತ್ತಿರುತ್ತಾರೆ. ಕರ್ನಾಟಕ ಸರ್ಕಾರದ ಅಧಿಸೂಚನೆ ಮೇರೆಗೆ ದಿನಾಂಕ: 1/4/2019 ರ ಪೂರ್ವದಲ್ಲಿ ನೊಂದಣಿಯಾದ ಮತ್ತು ಹೆಚ್.ಎಸ್.ಆರ್.ಪಿ. (ನಂಬರ್ ಪ್ಲೇಟ್) ಹೊಂದದೇ ಇರುವ ಎಲ್ಲ ಬಗೆಯ ವಾಹನಗಳಿಗೆ ಹೆಚ್.ಎಸ್.ಆರ್.ಪಿ. (ನಂಬರ್ ಪ್ಲೇಟ್) ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಮುಂಬರುವ ದಿನಗಳಲ್ಲಿ ಬೆಳಗಾವಿ ನಗರ ಪ್ರದೇಶದಲ್ಲಿ ಸಂಚರಿಸುವ ಎಲ್ಲ ಬಗೆಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಎಲ್ಲ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು. ನೊಂದಣಿ ಸಂಖ್ಯೆ ಇಲ್ಲದೇ ಸಂಚರಿಸುವ ವಾಹನಗಳನ್ನು ತಡೆಹಿಡಿದು ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದು. ಕಾರಣ ವಾಹನ ಮಾಲೀಕರು ಈ ಬಗ್ಗೆ ಎಚ್ಚರವಹಿಸಿ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ವಾಹನ ನೊಂದಣಿ ಸಂಖ್ಯೆಗಳನ್ನು ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ.