ಬೆಂಗಳೂರು: ಕಳೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ʻಪರೀಕ್ಷೆ-2′ ಶುಕ್ರವಾರದಿಂದ (ಜೂ.14) ರಾಜ್ಯಾದ್ಯಂತ ಆರಂಭವಾಗಲಿದ್ದು, 1,44,160 ಗಂಡು ಮಕ್ಕಳು, 79, 148 ಹೆಣ್ಣು ಮಕ್ಕಳು ಸೇರಿ ಒಟ್ಟು 2,23,308 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ದ್ದಾರೆ. 724ಕೇಂದ್ರಗಳಲ್ಲಿಜೂ.22ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಸ್ಸೆಸ್ಸೆಲ್ಸಿಯಲ್ಲಿ ಇದೇ ಮೊದಲ ಬಾರಿ ವರ್ಷಕ್ಕೆ ಮೂರು ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶ ವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ಒಟ್ಟು ನೋಂದಾಯಿಸಿಕೊಂಡವರಲ್ಲಿ 13,085 ಮಂದಿ ಪರೀಕ್ಷೆ 1ರಲ್ಲಿ ಉತ್ತೀರ್ಣಗೊಂಡಿದ್ದರೂ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2ತೆಗೆದುಕೊಂಡಿದ್ದಾರೆ. ಉಳಿದವರು ಅನುತ್ತೀರ್ಣ/ಪುನರಾವ ರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಮೊದಲ ದಿನ ಭಾಷಾ ಪರೀಕ್ಷೆ ನಡೆಯಲಿದ್ದು, ಬಹು ತೇಕ ಪರೀಕ್ಷೆಗಳು ನಿತ್ಯ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಸಂಗೀತ ಪರೀಕ್ಷೆಗಳು ಮಾತ್ರ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ನಡೆಯಲಿವೆ.