ಬೆಳಗಾವಿ:ನೆಹರೂ ನಗರದ ಕರಡಿ ಆಯುಷ್ ಆಸ್ಪತ್ರೆ ತಪಾಸಿಸುವ ನೆಪದಲ್ಲಿ ಕಾನೂನಾತ್ಮಕವಾಗಿಯೇ ಬ್ಲ್ಯಾಕಮೇಲ್ ಮೂಲಕ ಹಣ ಕೀಳಲು ಯತ್ನಿಸಿದ ತಾಲೂಕು ಆರೋಗ್ಯಾಧಿಕಾರಿ ಸಹಾಯಕ ಹಾಗೂ ಹೆಲ್ತ್ ಇನ್ಸಪೆಕ್ಟರ್ ನನ್ನು ಲೋಕಾಯುಕ್ತರು ರೆಡ್ ಹ್ಯಾಂಡ್ ವಶಕ್ಕೆ ಪಡೆದಿದ್ದಾರೆ.
ಟಿಎಚ್ ಓ ಡಾ. ಸಂಜಯ ಡುಮ್ಮಗೋಳ ಮತ್ತು ಅವರ ಸಹಾಯಕ ಶಂಭು ರಾಚನ್ನವರ ಸೇರಿ ನೆಹರೂ ನಗರದ ಆಸ್ಪತ್ರೆ ಮೇಲೆ ಪರಿಶೀಲನೆ ನೆಪದಲ್ಲಿ ದಾಳಿ ಮಾಡಿ ನ್ಯೂನ್ಯತೆಗಳನ್ನು ಕಂಡುಕೊಂಡಿದ್ದರಂತೆ..! ಜತೆಗೆ ಸದರಿ ಆಸ್ಪತ್ರೆಯ ವೈದ್ಯ ಡಾ. ವಿನಾಯಕ ಅವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿ ಬಂದಿದ್ದರಂತೆ.
ಆದರೆ ಮಾರನೇ ದಿನ ಮೇ. 28ರಂದು ದೂರುದಾರರಾದ ಡಾ. ವಿನಾಯಕ ಕರಡು ಅವರಿಗೆ ಕರೆ ಮಾಡಿ ಟಿಎಚ್ ಓ ಕಚೇರಿಗೆ ಕರೆಸಿಕೊಂಡು ನೊಟೀಸ್ ಕೊಟ್ಟು, ನೊಟೀಸಿನ ಪ್ರಕಾರ ಕ್ರಮ ಜರುಗಿಸದೇ ಇದರಲು 30ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೂರು ಕೊಟ್ಟ ಡಾ. ವಿನಾಯಕ ಕರಡಿ ಅವರಿಂದ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಇಂದು ಇನ್ಸ್ಪೆಕ್ಟರ್ ನಿರಂಜನ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದಾಗ, ಟಿಎಚ್ಓ ಡಾ. ಸಂಜಯ ಡುಮ್ಮಗೋಳ ಅವರ ಸಹಾಯಕ ಖದೀಮ ಶಂಭು ರಾಚನ್ನವರ ಎಂಬಾತ ರೆಡ್ ಹ್ಯಾಂಡ್ ಆಗಿ ಹಣದ ಸಮೇತ ಸಿಕ್ಕಿದ್ದಾನೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನ ನೀಡಿದ್ದರು.