ಉಡುಪಿ: ಕೊಂಕಣ ರೈಲ್ವೆ ಮಾರ್ಗದ, ಕಾಪು ತಾಲೂಕಿನ ಇನ್ನಂಜೆ-ಪಡುಬಿದ್ರಿ ಮಧ್ಯೆ ಹಳಿ ಜೋಡಣೆ ತಪ್ಪಿರುವುದನ್ನು ಸಕಾಲದಲ್ಲಿ ಗಮನಿಸಿದ ಜಾಗೃತ ಹಳಿ ನಿರ್ವಾ ಹಕ ಪ್ರದೀಪ್ ಶೆಟ್ಟಿ ಅವರು ಸಂಭಾವ್ಯ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ. ಶನಿವಾರ ತಡರಾತ್ರಿ 2.25ಕ್ಕೆ ಪ್ರದೀಪ್ ಶೆಟ್ಟಿ ಅವರು ಹಳಿಗಳ ಪರಿಶೀಲನೆ ಗಸ್ತು ನಡೆಸುತ್ತಿ ದ್ದಾಗ ಈ ಹಳಿ ಜೋಡಣೆ ತಪ್ಪಿರುವುದನ್ನು ಕತ್ತಲಲ್ಲೇ ಪತ್ತೆ ಹಚ್ಚಿದರು. ತಕ್ಷಣ ಉಡುಪಿ ಯಲ್ಲಿರುವ ಮೇಲಧಿಕಾರಿಗಳ ಗಮನಕ್ಕೆ ಈ ವಿಚಾರ ತಂದರು. ಅಧಿಕಾರಿಗಳು ತಕ್ಷಣ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಹಳಿ ದುರಸ್ತಿಗೊಳಿಸಿದರು. ಇದಕ್ಕೆ ಸುಮಾರು 3 ಗಂಟೆ ತಗಲಿತು. ಈ ವೇಳೆ ಈ ಮಾರ್ಗದ ಕೆಲ ರೈಲುಗಳನ್ನು ತಡೆಹಿಡಿಯಲಾಗಿತ್ತು.
ಬಹುಮಾನ ಘೋಷಣೆ: ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರು ಮಧ್ಯರಾತ್ರಿ
ಕತ್ತಲಲ್ಲಿ ಹಳಿ ಜೋಡಣೆ ತಪ್ಪಿರುವುದನ್ನು ಪತ್ತೆ ಹಚ್ಚಿ, ದುರಂತವನ್ನು ತಡೆದುದಕ್ಕಾಗಿ, ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷ್ ಕುಮಾರ್ಝಾ ಅವರು 25,000 ನಗದು ಬಹುಮಾನ ಘೋಷಿಸಿದ್ದಾರೆ.